BIG NEWS:‌ ನಟ ವಿಜಯ್ ಸೇತುಪತಿ ಅಭಿಮಾನಿಗಳಿಂದ ಉಚಿತವಾಗಿ ʼಟೊಮ್ಯಾಟೊʼ ವಿತರಣೆ

ದಿನೇ ದಿನೇ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದು ಗೃಹಿಣಿಯರು ಮನೆಯಲ್ಲಿ ಟೊಮ್ಯಾಟೊ ಕಟ್ ಮಾಡಲು ಹತ್ತು ಬಾರಿ ಯೋಚಿಸುವಂತಾಗಿದೆ. ದುಬಾರಿ ದರದಿಂದ ಟೊಮ್ಯಾಟೋ ಹಾಕಿ ಅಡುಗೆ ಮಾಡಲೂ ಕಷ್ಟವಾಗ್ತಿದೆ.

ಇಂತಹ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ಸೇತುಪತಿ ಅಭಿಮಾನಿಗಳ ಸಂಘ ಆಲಂದೂರು ಜಿಲ್ಲೆಯಲ್ಲಿ ಮಾನವೀಯತೆ ಮೆರೆದಿದೆ. ಟೊಮ್ಯಾಟೊ ದರ ಹೆಚ್ಚುತ್ತಿದ್ದು, ಆತಂಕದಲ್ಲಿದ್ದ ಗೃಹಿಣಿಯರಿಗೆ ಉಚಿತವಾಗಿ ಟೊಮ್ಯಾಟೊ ವಿತರಿಸಿದೆ.

ಚೆಂಗಲ್ಪಟ್ಟು ವಿಜಯ್ ಸೇತುಪತಿ ಅಭಿಮಾನಿ ಬಳಗದ ಮುಖ್ಯಸ್ಥ ತಾಂಬರಂ ವಿಕ್ಕಿ ಈ ವಿಶೇಷ ಕಾರ್ಯವನ್ನ ಉದ್ಘಾಟಿಸಿದರು. ಹಲವಾರು ವಿಜಯ್ ಸೇತುಪತಿ ಅನುಯಾಯಿಗಳು ಈ ರೀತಿ ಸಹಾಯ ಮಾಡಲು ಸಂತೋಷದಿಂದ ಒಟ್ಟುಗೂಡಿದರು. ಸಾಕಷ್ಟು ಗೃಹಿಣಿಯರು ಸಾಲುಗಳಲ್ಲಿ ನಿಂತು ಉಚಿತವಾಗಿ ಟೊಮ್ಯಾಟೊ ಪಡೆದುಕೊಂಡಿದ್ದಾರೆ.

ವಿಜಯ್ ಸೇತುಪತಿ ಅವರ ಅಭಿಮಾನಿಗಳ ಸಂಘದ ಕೊಡುಗೆಯು ನಮಗೆ ಅಗತ್ಯವಾದ ಪರಿಹಾರವನ್ನು ಒದಗಿಸಿದೆ ಎಂದು ಗೃಹಿಣಿಯರು ಕೃತಜ್ಞತೆ ತಿಳಿಸಿದರು. ಟೊಮ್ಯಾಟೊ ಬೆಲೆ ಹೆಚ್ಚಾಗಿರುವ ಸಂದರ್ಭದಲ್ಲಿ ಗೃಹಿಣಿಯರಿಗೆ ಉಚಿತವಾಗಿ ಟೊಮ್ಯಾಟೊ ವಿತರಿಸಿದ ಈ ಕ್ರಮವು ಸಾರ್ವಜನಿಕರ ಗಮನವನ್ನು ಸೆಳೆಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read