HomeLatest Newsಆಗಸ್ಟ್ 3 ರಂದು ತಮಿಳುನಾಡು ಹಾಗೂ ಕರ್ನಾಟಕ ಸಿ.ಎಂ ಮುಖಾಮುಖಿ?; ಕಾವೇರಿ ಬಿಕ್ಕಟ್ಟು ಕುರಿತು ಮಹತ್ವದ...

ಆಗಸ್ಟ್ 3 ರಂದು ತಮಿಳುನಾಡು ಹಾಗೂ ಕರ್ನಾಟಕ ಸಿ.ಎಂ ಮುಖಾಮುಖಿ?; ಕಾವೇರಿ ಬಿಕ್ಕಟ್ಟು ಕುರಿತು ಮಹತ್ವದ ಚರ್ಚೆ ಸಾಧ್ಯತೆ

ಬೆಂಗಳೂರು-ರಾಜ್ಯದಲ್ಲಿ ತೀವ್ರಗೊಂಡಿರುವ ಮಳೆ ಅಭಾವ ಹಾಗೂ ಕಾವೇರಿ ನೀರಿನ ಅಭಾವದ ನಡುವೆಯೇ, ತಮಿಳುನಾಡಿನ ಮುಖ್ಯಮಂತ್ರಿ ್ಷ ಜೋಸೆಫ್ ವಿಜಯ್ ಕರ್ನಾಟಕದ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ.

ವಿಜಯ್ ಅವರ ಮನವಿಯ ಮೇರೆಗೆ ಆಗಸ್ಟ್ 3ರಂದು ಭೇಟಿಗೆ ಸಮಯ ನೀಡಲು ಡಿಸಿಎಂ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ನೀರಿನ ಅಭಾವ ಮತ್ತು ಕಾನೂನು ಒತ್ತಡ

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ನೀರು ಹರಿಸಬೇಕಿದೆ. ಆದರೆ, ಪ್ರಸಕ್ತ ವರ್ಷ ಮಳೆಯ ಅಭಾವದಿಂದಾಗಿ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರು ತೀವ್ರವಾಗಿ ಇಂಗಿದೆ. ಸಂಗ್ರಹವಿರುವ ನೀರನ್ನು ಕೇವಲ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರಗಳ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಸಭೆಗಳಲ್ಲಿ ಕರ್ನಾಟಕವು ತನ್ನ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರೂ, ತಮಿಳುನಾಡಿಗೆ ಹಂತ-ಹಂತವಾಗಿ ನೀರು ಹರಿಸುವಂತೆ ನಿರ್ದೇಶನಗಳು ಬಂದಿರುವುದು ರಾಜ್ಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕಳೆದ ವಾರ ವಿಜಯ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಭೇಟಿಗೆ ಸಮಯ ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಶಿವಕುಮಾರ್ ಆಗಸ್ಟ್ 3ರಂದು ದಿನಾಂಕ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.

ಸಿನಿಮಾ ಪ್ರಚಾರ ಮತ್ತು ರಾಜಕೀಯ ಭೇಟಿ ಒಟ್ಟಾಗಿ?

ಇನ್ನೊಂದೆಡೆ, ವಿಜಯ್ ಅಭಿನಯದ ನೂತನ ಚಲನಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಮಾದ ಪ್ರಚಾರದ ನಿಮಿತ್ತ ಬೆಂಗಳೂರಿಗೆ ಆಗಮಿಸುವ ವೇಳೆಯಲ್ಲೇ ಈ ರಾಜಕೀಯ ಭೇಟಿಯೂ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ವಿಜಯ್ ಅವರ ಕಚೇರಿಯಿಂದ ಬೆಂಗಳೂರು ಭೇಟಿಯ ಅಧಿಕೃತ ಪ್ರವಾಸದ ವೇಳಾಪಟ್ಟಿ ಇನ್ನು ಹೊರಬಿದ್ದಿಲ್ಲ.

ಭೇಟಿಯಲ್ಲಿ ಏನೆಲ್ಲ ಚರ್ಚೆ ನಡೆಯಬಹುದು?

ಒಂದು ವೇಳೆ ವಿಜಯ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರೆ, ಕಾವೇರಿ ನೀರು ಹಂಚಿಕೆ ಮಾತ್ರವಲ್ಲದೆ, ತಮಿಳುನಾಡು ತೀವ್ರವಾಗಿ ವಿರೋಧಿಸುತ್ತಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಹಕರಿಸುವಂತೆ ಕರ್ನಾಟಕದ ಪರವಾಗಿ ಮನವಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ತಮಿಳುನಾಡು ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ವಿಜಯ್, ಈ ಭೇಟಿಯ ಮೂಲಕ ಯಾವ ನಿಲುವು ತಳೆಯಲಿದ್ದಾರೆ ಎಂಬುದು ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular