HomeLatest Newsತನ್ನ ಕಾರ್ ಡ್ರೈವರ್ ಮಗನನ್ನು ನಂಬಿ ಚುನಾವಣೆಗೆ ಟಿಕೆಟ್ ಕೊಟ್ಟಿದ್ದ ವಿಜಯ್; ಫಲಿತಾಂಶ ಏನಾಯಿತು?

ತನ್ನ ಕಾರ್ ಡ್ರೈವರ್ ಮಗನನ್ನು ನಂಬಿ ಚುನಾವಣೆಗೆ ಟಿಕೆಟ್ ಕೊಟ್ಟಿದ್ದ ವಿಜಯ್; ಫಲಿತಾಂಶ ಏನಾಯಿತು?

ನಿನ್ನೆ ( ಮೇ 4 ) ತಮಿಳುನಾಡು ರಾಜಕಾರಣದಲ್ಲಿ ಐತಿಹಾಸಿಕ ದಿನ ನಿರ್ಮಾಣವಾಗಿದೆ. ಏಪ್ರಿಲ್ 23ರಂದು ನಡೆದಿದ್ದ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಿತು. ಈ ಪೈಕಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಆಡಳಿತ ಸ್ಥಾನದಲ್ಲಿದ್ದ ಡಿಎಂಕೆ 59 ಹಾಗೂ ಎಐಎಡಿಎಂಕೆ 47 ಕ್ಷೇತ್ರಗಳಲ್ಲಿ ಗೆಲುವು ಕಂಡಿವೆ.

ಹೀಗೆ ಬಹು ವರ್ಷಗಳಿಂದ ಇರುವ ಅನುಭವವನ್ನು ಹೊಂದಿರುವ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಮಣ್ಣುಮುಕ್ಕಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ಸ್ಪಷ್ಟ ಬಹುಮತ ಪಡೆದು ಸರ್ಕಾರ ಸ್ಥಾಪಿಸಲು ಇನ್ನೂ 10 ಸ್ಥಾನಗಳ ಅನಿವಾರ್ಯತೆ ಇದ್ದು, ಟಿವಿಕೆ ಯಾರಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆ ಎದ್ದಿದೆ.

ಹೀಗೆ ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಸಾಧಿಸಿ ವಿಶೇಷ ಸಾಧನೆ ಮಾಡಿರುವ ಟಿವಿಕೆ ಬಳಗದಲ್ಲಿ ವಿಶೇಷವಾದ ಅಭ್ಯರ್ಥಿಗಳೂ ಇದ್ದಾರೆ. ಆಟೊ ಡ್ರೈವರ್ ಆಗಿರುವ ವಿಜಯ್ ಫ್ಯಾನ್ ಶಾಸಕನಾಗಿ ರೂಪುಗೊಂಡಿದ್ದರೆ, ಮತ್ತೊಂದೆಡೆ ವಿಜಯ್‌ ಬಳಿ ಹಲವು ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ರಾಜೇಂದ್ರನ್ ಅವರ ಪುತ್ರ ಸಬರಿನಾಥನ್ ಆರ್ ದಿಗ್ವಿಜಯ ಸಾಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22ನೇ ವಿಧಾನಸಭಾ ಕ್ಷೇತ್ರ ವಿರುಗಾಂಪಕ್ಕಮ್‌ನಲ್ಲಿ ಕಣಕ್ಕಿಳಿದಿದ್ದ ಸಬರಿನಾಥನ್ ಡಿಎಂಕೆಯ ಪ್ರಭಾಕರ ರಾಜ ಎಎಂವಿ ವಿರುದ್ಧ 27086 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಕಂಡಿದ್ದಾರೆ. ಸಬರಿನಾಥನ್ 76092 ಮತಗಳನ್ನು ಪಡೆದರೆ, ಪ್ರಭಾಕರ ರಾಜ ಎಎಂವಿ 49006 ಮತಗಳನ್ನು ಪಡೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular