HomeEntertainmentಜುಲೈ14ಕ್ಕೆ ದುಬೈನಲ್ಲಿ ಬಿಡುಗಡೆಯಾಗಲಿದೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'

ಜುಲೈ14ಕ್ಕೆ ದುಬೈನಲ್ಲಿ ಬಿಡುಗಡೆಯಾಗಲಿದೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಅರುಣ್ ಅಮುಕ್ತ ನಿರ್ದೇಶನದ ಬಹು ನಿರೀಕ್ಷಿತ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೀಗ ಜುಲೈ 14ರಂದು ದುಬೈನಲ್ಲಿ ಈ ಸಿನಿಮಾ ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಲಾಗಿದೆ. ರಿಲೀಸ್ ಮಾಡುವುದರ ಕುರಿತು ಚಂದನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.

ಈ ಚಿತ್ರವನ್ನು ವೆರೈಟಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಹಾಗೂ ಶಿವಲಿಂಗೇಗೌಡ ಬಂಡವಾಳ ಹೂಡಿದ್ದು, ಚಂದನ್ ಶೆಟ್ಟಿ ಸೇರಿದಂತೆ ಅರವಿಂದ ರಾವ್, ಸಿಂಚನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅಮರ್, ಭಾವನಾ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ, ರಘು ರಾಮನಕೊಪ್ಪ, ಬಣ್ಣ ಹಚ್ಚಿದ್ದಾರೆ. ವಿಜೇತ್ ಚಂದ್ರ ಸಂಗೀತ ಸಂಯೋಜನೆ ನೀಡಿದ್ದು, ಟೈಗರ್ ಶಿವು, ಹಾಗೂ ನರಸಿಂಹ ಸಾಹಸ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನವಿದೆ. ಜುಲೈ 19ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular