BREAKING NEWS: ವಿಧಾನ ಪರಿಷತ್ ನಲ್ಲೂ ಹನಿಟ್ರ್ಯಾಪ್ ಗದ್ದಲ: ಸಭಾಪತಿ ಪೀಠದ ಮುಂದೆ ಪೇಪರ್ ಹರಿದು ಎಸೆದ ಬಿಜೆಪಿ ಸದಸ್ಯರು

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನಡೆದ ಹನಿಟ್ರ್ಯಾಪ್ ಗದ್ದಲ, ಬಿಜೆಪಿ ಶಾಸಕರ ಅಮಾನತು ಪ್ರಕರಣ ವಿಧಾನ ಪರಿಷತ್ ನಲ್ಲಿಯೂ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.

ಬಿಜೆಪಿ ಸದಸ್ಯರು ವಿಧನಪರಿಷತ್ ನಲ್ಲಿಯೂ ಹನಿಟ್ರ್ಯಾಪ್ ಪ್ರಕರಣದ ವಿಚಾರ ಪ್ರಸ್ತಾಪಿಸಿ ಗದ್ದಲ ನಡೆಸಿದರು. ಇದೇ ವೇಳೆ ಸಭಾಪತಿ ಪೀಠದ ಮುಂದೆ ತೆರಳಿ ನಿರ್ಣಯಗಳ ಪೇಪರ್ ಹರಿದು ತೂರಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ ಕೆಲಕಾಲ ಕಲಾಪವನ್ನು ಮುಂದೂಡಿ ಆದೇಶ ಹೊರಡಿಸಿದರು.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read