HomeKarnatakaBIG NEWS: ವಿಧಾನಸೌಧದ ಗಾರ್ಡನ್ ನಲ್ಲಿ ಬಿಯರ್ ಬಾಟಲ್ ಗಳು ಪತ್ತೆ!

BIG NEWS: ವಿಧಾನಸೌಧದ ಗಾರ್ಡನ್ ನಲ್ಲಿ ಬಿಯರ್ ಬಾಟಲ್ ಗಳು ಪತ್ತೆ!

ಬೆಂಗಳೂರು: ವಿಧಾನಸೌಧದ ಆವರಣದಲ್ಲಿರುವ ಗಾರ್ಡನ್ ನಲ್ಲಿಯೇ ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದು, ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ರಾಜ್ಯ ಸರ್ಕಾರ ನಿನ್ನೆಯಷ್ಟೇ ಸರ್ಕಾರಿ ಕಚೇರಿ ಆವರಣ, ಸುತ್ತಮುತ್ತ ಯಾವುದೇ ಮಾದಕ ವಸ್ತುಗಳು, ಮದ್ಯ ಕೊಂಡೊಯ್ಯಬಾರದು ಎಂದು ಆದೇಶ ಹೊರಡಿಸಿದ್ದ ಒಂದು ದಿನದ ಅಂತರದಲ್ಲೇ ರಾಜ್ಯದ ಶಕ್ತಿಸೌಧ ವಿಧಾನಸೌಧದ ಗಾರ್ಡನ್ ನಲ್ಲಿಯೇ ಬಿಯರ್ ಬಾಟಲ್ ಗಳು ಪತ್ತೆಯಾಗಿವೆ. ಇದು ಭದ್ರತಾ ವೈಫಲ್ಯವೋ ಅಥವಾ ದುರುದ್ದೇಶಪೂರ್ವಕವೋ ಎಂಬುದು ಇನ್ನಷ್ಟ ತಿಳಿಯಬೇಕಿದೆ.

ಯಾರೋ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಬಿಯರ್ ತಂದು ಸೇವಿಸಿ, ಬಾಟಲ್ ಗಳನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ವಿಧಾನಸೌಧದ ಪಶ್ಚಿಮ ಭಾಗದ ಗಾರ್ಡನ್ ನಲ್ಲಿ ಬಿಯರ್ ಬಾಟಲ್ ಗಳು ಬಿದ್ದಿರುವುದು ಪತ್ತೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular