HomeInternationalಟೈಟಾನ್ ಜಲಾಂತರ್ಗಾಮಿ ದುರಂತ; ಪಯಣದ ಆರಂಭದ ವಿಡಿಯೋ ವೈರಲ್

ಟೈಟಾನ್ ಜಲಾಂತರ್ಗಾಮಿ ದುರಂತ; ಪಯಣದ ಆರಂಭದ ವಿಡಿಯೋ ವೈರಲ್

ಶತಮಾನದ ಹಿಂದೆ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳತ್ತ ಸಾಗಿ ಅಧ್ಯಯನ ನಡೆಸಲೆಂದು ತೆರಳಿದ್ದ ಟೈಟಾನ್ ಹೆಸರಿನ ಜಲಾಂತರ್ಗಾಮಿ ವಾಹನ ಮುಳುಗಿಹೋಗಿದೆ. ಅದರಲ್ಲಿದ್ದ ಐವರೂ ಕೂಡಾ ಸಾವನ್ನಪ್ಪಿದ್ದಾರೆ.

ಜೂನ್ 18ರಂದು ’ಪೋಲಾರ್‌ ಪ್ರಿನ್ಸ್’ ಎಂಬ ನೌಕೆಯಿಂದ ಬಿಟ್ಟ 1 ಗಂಟೆ 45 ನಿಮಿಷಗಳ ಒಳಗೆ ಈ ಜಲಾಂತರ್ಗಾಮಿ ಸಂಪರ್ಕದಿಂದ ದೂರ ಸಾಗಿದೆ. ಪೋಲಾರ್‌ ಪ್ರಿನ್ಸ್‌ನಲ್ಲಿದ್ದ ನಿಯಂತ್ರಣ ಕೊಠಡಿಗೆ ಪ್ರತಿ 15 ನಿಮಿಷಕ್ಕೊಮ್ಮೆ ಪಿಂಗ್ ಮಾಡುತ್ತಿದ್ದ ಟೈಟಾನ್, ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಬರುತ್ತಲೇ, ಮದ್ಯಾಹ್ನ 3 ಗಂಟೆ ವೇಳೆಗೆ, ಪೋಲಾರ್‌ ಪ್ರಿನ್ಸ್‌ನೊಂದಿಗೆ ಸಂಪರ್ಕ ಕಳೆದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಬ್ಬಿ ಜಾಕ್ಸನ್ ಹೆಸರಿನ ಟಿಕ್‌ಟಾಕರ್‌ ಒಬ್ಬಾಕೆ ಟೈಟಾನ್ ಜಲಾಂತರ್ಗಾಮಿಯು ಟೈಟಾನಿಕ್‌ ಮುಳುಗಿರುವ ಸ್ಥಳದತ್ತ ತೆರಳಲು ಆರಂಭಿಸುತ್ತಲೇ ವಿಡಿಯೋವೊಂದನ್ನು ಶೂಟ್ ಮಡಿಕೊಂಡು ಶೇರ್‌ ಮಾಡಿದ್ದು, ಅದೀಗ ವೈರಲ್ ಆಗಿದೆ.

ಈ ಜಲಾಂತರ್ಗಾಮಿಯಲ್ಲಿ ಐದು ಪ್ರಯಾಣಿಕರಿದ್ದರು. ಈ ಅಧ್ಯಯನಕ್ಕೆ ಮುಂದಾಗಿದ್ದ ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ಸ್‌ನ ಸಿಇಓ ಸ್ಟಾಕ್ಟನ್ ರಶ್, ಬ್ರಿಟನ್‌ನ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಚಾಲಕ ಪೌಲ್ ಹೆನ್ರಿ ನಾರ್ಗೆಲೆಟ್ ಮತ್ತು ಪಾಕಿಸ್ತಾನದ ಉದ್ಯಮಿ ಶಾಜ಼ಾದಾ ದಾವೂದ್ ಹಾಗೂ ಆತನ ಪುತ್ರ ಸುಲೇಮಾನ್ ಈ ನತದೃಷ್ಟರು.

23,000 ಪೌಂಡ್‌ಗಳಷ್ಟು ತೂಕದ ಈ ಜಲಾಂತರ್ಗಾಮಿಯನ್ನ ಕಾರ್ಬನ್ಫ ಫೈಬರ್‌ ಹಾಗೂ ಟೈಟಾನಿಯಮ್‌ನಿಂದ ರಚಿಸಲಾಗಿತ್ತು.

https://twitter.com/iv_times/status/1671669727733641217?ref_src=twsrc%5Etfw%7Ctwcamp%5Etweetembed%7Ctwterm%5E1671669727733641217%7Ctwgr%5E0712a3ac9bcfa3814d6136fb382d8507ba45d11d%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-videographer-captures-moment-titan-submersible-began-its-doomed-voyage

 

For Latest News Updates, Join Our Whatsapp Community🚩
RELATED ARTICLES

Most Popular