Video: ರೀಲ್ಸ್‌ ಗಾಗಿ ಎಮ್ಮೆ ಮೇಲೆ ಸವಾರಿ; ಠಾಣೆಗೆ ಕರೆತಂದ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಲು ಕೆಲವರು ಚಿತ್ರವಿಚಿತ್ರ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಅರಿವು ಅವರಿಗಿರುವುದಿಲ್ಲ. ಇದೇ ರೀತಿ ಉತ್ತರ ಪ್ರದೇಶದ ಅಮ್ರೋಹಾನಲ್ಲಿ ನಡೆದ ಘಟನೆಯೊಂದರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದ ಯೂಟ್ಯೂಬರ್‌ ಒಬ್ಬನಿಗೆ  ಪೊಲೀಸ್ ಠಾಣೆಯಲ್ಲಿ ಥಳಿಸಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಠಾಣೆಯೊಳಗೆ ಯೂಟ್ಯೂಬರ್‌ ಮೇಲೆ ಲಾಠಿ ಪ್ರಹಾರ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಮ್ಮೆ ಸವಾರಿ ಮಾಡುವಾಗ ಯೂಟ್ಯೂಬರ್ ತನ್ನ ಬೆಂಬಲಿಗರೊಂದಿಗೆ ರೀಲ್ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ, ಇದರಿಂದಾಗಿ ಸಿಎಚ್‌ಸಿ ಆಸ್ಪತ್ರೆಯ ಹೊರಗಿನ ಬೀದಿಗಳಲ್ಲಿ ಭೀತಿ ಉಂಟಾಗಿತ್ತು. ತಕ್ಷಣ ಪೊಲೀಸರು ಯೂಟ್ಯೂಬರ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.

ನವೆಂಬರ್ 17 ರಂದು ರಾತ್ರಿ 9 ಗಂಟೆಗೆ ರೆಹಾನ್ ಎಂದು ಗುರುತಿಸಲಾಗಿರುವ ಯೂಟ್ಯೂಬರ್ ಅಮ್ರೋಹಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಎಚ್‌ಸಿ ಆಸ್ಪತ್ರೆ ಬಳಿಯ ಮಾರುಕಟ್ಟೆ ಪ್ರದೇಶವನ್ನು ತಲುಪಿದಾಗ ಈ ಘಟನೆ ಸಂಭವಿಸಿದೆ. ರೆಹಾನ್ ತನ್ನ ಬೆಂಬಲಿಗರೊಂದಿಗೆ ಬಂದು ಎಮ್ಮೆ ಸವಾರಿ ಮಾಡುವಾಗ ರೀಲ್ ಮಾಡಲು ಪ್ರಾರಂಭಿಸಿದ್ದಾನೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ರೆಹಾನ್ ನನ್ನು ವಶಕ್ಕೆ ಪಡೆದ ನಂತರ ಬೆಂಬಲಿಗರು ಸಹ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಿಸಿದರು.

ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರ ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “17.11.2024 ರಂದು ಸುಮಾರು ರಾತ್ರಿ 9:00 ಗಂಟೆಗೆ ಮೌ ನಿವಾಸಿ ಬಾಬು ಖಾನ್ ಅವರ ಮಗ ಯೂಟ್ಯೂಬರ್ ರೆಹಾನ್ ತನ್ನ ಬೆಂಬಲಿಗರೊಂದಿಗೆ ಸಿಎಚ್‌ಸಿ ಬಳಿಯ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸಿ ಎಮ್ಮೆ ಮೇಲೆ ಸವಾರಿ ಮಾಡಿ ರೀಲ್ ಶೂಟ್ ಮಾಡುವಾಗ ಸಾರ್ವಜನಿಕರು ಭೀತಿಗೊಂಡರು” ಎಂದಿದ್ದಾರೆ.

“ಮಾಹಿತಿ ಪಡೆದ ಪೊಲೀಸರು ತಕ್ಷಣ ಯೂಟ್ಯೂಬರ್‌ನನ್ನು ಬಂಧಿಸಿ ಪೊಲೀಸ್ ಔಟ್‌ಪೋಸ್ಟ್‌ಗೆ ಕರೆತಂದರು. ಆದರೆ, ಯೂಟ್ಯೂಬರ್ ತನ್ನ ಬೆಂಬಲಿಗರನ್ನು ಕರೆದು, ಗುಂಪನ್ನು ಒಟ್ಟುಗೂಡಿಸಿ ಗಲಾಟೆ ಮಾಡಲು ಪ್ರಾರಂಭಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ, ಪೊಲೀಸರು ಸ್ಥಳದಿಂದ ಗುಂಪನ್ನು ಚದುರಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡರು ಎಂದಿದ್ದಾರೆ

“ಘಟನೆಯ ತನಿಖೆಯ ಆಧಾರದ ಮೇಲೆ, ಅಮ್ರೋಹ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಾಮಾನ್ಯವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read