HomeIndiaVideo: ಪ್ರಧಾನಿ ಮೋದಿಗೆ ಮಹಿಳಾ ಸಂಸದರಿಂದ ಘೇರಾವ್, ಸಂಚು ಬಯಲು ಮಾಡಿದ ವಿಡಿಯೋ

Video: ಪ್ರಧಾನಿ ಮೋದಿಗೆ ಮಹಿಳಾ ಸಂಸದರಿಂದ ಘೇರಾವ್, ಸಂಚು ಬಯಲು ಮಾಡಿದ ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ನಿಗದಿಯಾಗಿದ್ದ ಕೆಲವೇ ನಿಮಿಷಗಳ ಮೊದಲು ಸದನದಲ್ಲಿ ಗದ್ದಲ ತೀವ್ರಗೊಂಡಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿಗೆ ಮಹಿಳಾ ಸಂಸದರಿಂದ ಘೇರಾವ್ ಹಾಕುವ ಪ್ರಯತ್ನ ನಡೆದಿತ್ತು. ಈ ಸಂಚು ಈಗ ವಿಡಿಯೋ ಮೂಲಕ ಬಹಿರಂಗವಾಗಿದೆ.

ಫೆಬ್ರವರಿ 4ರಂದು ಲೋಕಸಭೆಯಲ್ಲಿ ಆಗಿರುವ ಘಟನೆ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ವಿಡಿಯೋ ಒಂದನ್ನು ಮಂಗಳವಾರ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಕೆಲ ಹೊತ್ತು ಮೊದಲು ವಿರೋಧ ಪಕ್ಷಗಳ ಮಹಿಳಾ ಸಂಸದರು ಅವರ ಕುರ್ಚಿಯ ಸುತ್ತಲೂ ಧರಣಿ ನಡೆಸಲು ಆಗಮಿಸಿದ್ದು, ಕೈಯಲ್ಲಿ ಬ್ಯಾನರ್‌ಗಳನ್ನು ಹಿಡಿದಿದ್ದರು ಎಂಬುದನ್ನು ವಿಡಿಯೋ ಬಹಿರಂಗ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋದಲ್ಲಿ ಸಚಿವ ಗಿರಿರಾಜ್ ಸಿಂಗ್ ಎಲ್ಲಾ ಸದಸ್ಯರತ್ತ ಕೈ ಮುಗಿದು, ಪ್ರಧಾನಿ ಕುರ್ಚಿಯನ್ನು ಸುತ್ತುವರೆಯಬೇಡಿ ಎಂದು ಮನವಿ ಮಾಡುತ್ತಿರುವುದನ್ನು ಕಾಣಬಹುದು. ಬಿಜೆಪಿಯ ಮಹಿಳಾ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನು ಬರೆದ ಬಳಿಕ ಈ ವಿಡಿಯೋ ಬಹಿರಂಗವಾಗಿದೆ.

ಲೋಕಸಭೆಯ ಒಳಗೆ ಪ್ರತಿಪಕ್ಷಗಳು ನಾಟಕಗಳನ್ನು ಮಾಡುತ್ತಿವೆ. ಸಂವಿಧಾನಸ ಮೌಲ್ಯಗಳನ್ನು ಮರೆತು ಗದ್ದಲ ಎಬ್ಬಿಸಲು ಪ್ರಯತ್ನ ನಡೆಸಿವೆ ಎಂದು ಮಹಿಳಾ ಸಂಸದರು ಆರೋಪಿಸಿದ್ದು, ಪ್ರತಿಪಕ್ಷದ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್‌ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 4ರ ಬುಧವಾರ ಉತ್ತ ನೀಡಬೇಕಿತ್ತು. ಆದರೆ ಮೋದಿ ಭಾಷಣಕ್ಕೂ ಮೊದಲು ಮಹಿಳಾ ಸಂಸದರಿಂದ ಅವರಿಗೆ ಘೇರಾವ್ ಹಾಕುವ ಪ್ರಯತ್ನ ಮಾಡಲಾಗಿತ್ತು.

ಬಿಜೆಪಿಯ ಮಹಿಳಾ ಸಂಸದರು ತಮ್ಮ ಪತ್ರದಲ್ಲಿ, ಕೆಲವು ಮಹಿಳಾ ಸಂಸದರು ಕೈಯಲ್ಲಿ ಪ್ಲೆಕಾರ್ಡ್‌ ಹಿಡಿದು ಸದನದಲ್ಲಿ ದರ್ಪದಿಂದ ವರ್ತಿಸಿದ್ದಾರೆ. ಆ ಕಡೆಯಿಂದ ಬಂದ ಅವರು ಕೇವಲ ಪ್ರಧಾನಿ ಕುರ್ಚಿಗೆ ಘೇರಾವ್ ಹಾಕಲು ಮಾತ್ರ ಯತ್ನಿಸಲಿಲ್ಲ. ಹಿರಿಯ ಸಚಿವರು ಕುಳಿತುಕೊಳ್ಳುವ ಸ್ಥಳವನ್ನು ಸುತ್ತುವರೆದರು ಎಂದು ಪತ್ರದಲ್ಲಿ ಹೇಳಿದ್ದಾರೆ.

ಇದೇ ಮೊದಲು: ಫೆಬ್ರವರಿ 4ರಂದು ಲೋಕಸಭೆಯಲ್ಲಿ ನಡೆದ ಘಟನೆ ಭಾರತದ ಇತಿಹಾಸದಲ್ಲೇ ಮೊದಲು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಪ್ರಧಾನಿಗಳು ಮಾತನಾಡಿದ ಮೇಲೆ ಭಾಷಣವನ್ನು ಅಂಗೀಕಾರ ಮಾಡಲಾಗುತ್ತಿತ್ತು.

ಆದರೆ ಕಳೆದ ಬುಧವಾರ ಮಹಿಳಾ ಸಂಸದರ ಘೇರಾವ್ ಯತ್ನ, ಪ್ರತಿಪಕ್ಷಗಳ ಭಾರೀ ಗದ್ದಲದ ಕಾರಣ ಭಾಷಣಕ್ಕೆ ಹಾಗೆಯೇ ಅನುಮೋದನೆ ನೀಡಲಾಗಿತ್ತು.

ಅಲ್ಲದೇ ಘೇರಾವ್ ಯತ್ನವನ್ನು ನೋಡಿದ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪಕ್ಕೆ ಆಗಮಿಸಬೇಡಿ ಎಂದು ಪ್ರಧಾನಿಗಳಿಗೆ ಸಂದೇಶವನ್ನು ನೀಡಿದರು. ಪ್ರಧಾನಿಗೆ ಘೇರಾವ್ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಆದ್ದರಿಂದ ನಾನು ಪ್ರಧಾನಿಗಳಿಗೆ ಸಂದೇಶ ನೀಡಿದೆ ಎಂದು ಸ್ಪೀಕರ್ ಹೇಳಿದ್ದಾರೆ.

ಲೋಕಸಭೆಯ ನಾಯಕನಿಗೆ ಮಾತನಾಡಲು ಅವಕಾಶ ನೀಡದಿರುವುದು ಬಹಳ ಕೆಟ್ಟ ಸಂಸ್ಕೃತಿ. ಪ್ರತಿಪಕ್ಷಗಳು ಸದಸ ಸುಗಮವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular