HomeAutoVideo - ಈ ಶತಕೋಟ್ಯಧಿಪತಿಯ ಗ್ಯಾರೇಜ್‌ನಲ್ಲಿವೆ 100 ಕ್ಕೂ ಅಧಿಕ ಕಾರುಗಳು

Video – ಈ ಶತಕೋಟ್ಯಧಿಪತಿಯ ಗ್ಯಾರೇಜ್‌ನಲ್ಲಿವೆ 100 ಕ್ಕೂ ಅಧಿಕ ಕಾರುಗಳು

ಒಂದು ಕಾಲದಲ್ಲಿ ಅಂಬಾಡರ್‌ ಹಾಗೂ ಪ್ರೀಮಿಯರ್‌ ಪದ್ಮಿನಿ ಕಾರುಗಳಿಗೆ ಸೀಮಿತವಾಗಿದ್ದ ಭಾರತದ ರಸ್ತೆಗಳಲ್ಲಿ ಇದೀಗ ವಿಶ್ವದ ಎಲ್ಲೆಡೆ ಉತ್ಪಾದಿಸಲ್ಪಡುವ ಐಶಾರಾಮಿ ಕಾರುಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಶತಕೋಟ್ಯಾಧಿಪತಿಯೊಬ್ಬರ ಗ್ಯಾರೇಜ್ ಒಂದರ ಪರಿಚಯ ಮಾಡಿಸಿದ್ದಾರೆ. ಕುಬೇರ್‌ ಗ್ರೇನ್ಸ್ & ಸ್ಪೈಸಸ್ ಲಿ.ನ ನಿರ್ದೇಶಕ ವಿಕಾಸ್ ಮಲುರ ಗ್ಯಾರೇಜ್‌ ಭೇಟಿ ಮಾಡಿದ ಇನ್‌ಫ್ಲುಯೆನ್ಸರ್‌ ಒಬ್ಬರು ಅಲ್ಲಿರು ಕಾರುಗಳನ್ನು ವೀಕ್ಷಕರಿಗೆ ತೋರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಗ್ಯಾರೇ‌ಜ್‌ನಲ್ಲಿ ನೂರಕ್ಕೂ ಹೆಚ್ಚು ಕಾರುಗಳಿದ್ದು, ರೋಲ್ಸ್ ರಾಯ್ಸ್‌ನಿಂದ ಬೆಂಟ್ಲೆ, ಲ್ಯಾಂಬೋರ್ಗಿನಿಯಿಂದ ಹಿಡಿದು ಆಸ್ಟನ್ ಮಾರ್ಟಿನ್‌ವರೆಗೂ ದೊಡ್ಡ ದೊಡ್ಡ ಬ್ರಾಂಡ್‌ಗಳ ಕಾರುಗಳಿವೆ.

ಲ್ಯಾಂಬೋರ್ಗಿನಿ ಉರುಸ್‌ ಕಾರಿನಿಂದ ಆರಂಭಗೊಳ್ಳುವ ಗ್ಯಾರೇಜ್‌ನ ಪರಿಚಯ, ಬೆಂಟ್ಲೆ ಕಾಂಟಿನೆಂಟಲ್ ಜಿಟಿ, ಲ್ಯಾಂಬೋರ್ಗಿನಿ ಹ್ಯುರಾಕಾನ್ ಎಸ್‌ಟಿಓ, ಆಸ್ಟನ್ ಮಾರ್ಟಿನ್ ಸೂಪರ್‌ ಲ್ಯಾಗೆರಾಗಳನ್ನು ತೋರಿಸಿಕೊಂಡು ಸಾಗುತ್ತದೆ.

ಈ ಎಲ್ಲಾ ಕಾರುಗಳ ನೋಂದಣಿ ಸಂಖ್ಯೆಗಳಲ್ಲಿ ’9’ ಅಂಕಿ ಸಾಮಾನ್ಯವಾಗಿ ಕಂಡು ಬಂದಿರುವುದು ವಿಶೇಷವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular