HomeLive NewsBREAKING : ಸಂಧ್ಯಾ ಥಿಯೇಟರ್’ನ ಶೌಚಾಲಯದಲ್ಲಿ 'ವಿಡಿಯೋ ಚಿತ್ರೀಕರಣ' ಕೇಸ್ : ಅಪ್ರಾಪ್ತ ಬಾಲಕ ಅರೆಸ್ಟ್.!

BREAKING : ಸಂಧ್ಯಾ ಥಿಯೇಟರ್’ನ ಶೌಚಾಲಯದಲ್ಲಿ ‘ವಿಡಿಯೋ ಚಿತ್ರೀಕರಣ’ ಕೇಸ್ : ಅಪ್ರಾಪ್ತ ಬಾಲಕ ಅರೆಸ್ಟ್.!


ಬೆಂಗಳೂರು : ಬೆಂಗಳೂರಿನ ಸಂಧ್ಯಾ ಥಿಯೇಟರ್ ನ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು, ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರಮಂದಿರಕ್ಕೆ ಭಾನುವಾರ ಸಿನಿಮಾ ವೀಕ್ಷಣೆಗೆ ಬಂದಿದ್ದಾಗ ಅಪ್ರಾಪ್ತ ಬಾಲಕ ಈ ಕೃತ್ಯ ಎಸಗಿದ್ದಾನೆ. ಚಿತ್ರಮಂದಿರದ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಮಹಿಳೆ ಜೋರಾಗಿ ಕಿರುಚಿದ್ದಾರೆ. ಆಗ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿ ಶೌಚಾಲಯದಲ್ಲಿದ್ದ ಬಾಲಕನನ್ನು ಹಿಡಿದು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಾಗ ಬಾಲಕ ವಿಡಿಯೋ ಚಿತ್ರೀಕರಿಸಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಥಿಯೇಟರ್ ನ ಸೌಚಾಲಯದಲ್ಲಿ ಕ್ಯಾಮರಾ ಇಟ್ಟು ಯುವತಿಯ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗುತ್ತಿತ್ತು .ಮಹಿಳಾ ಟೆಕ್ಕಿ ದೂರಿನ ಹಿನ್ನೆಲೆಯಲ್ಲಿ ಮಡಿವಾಳ ಠಾಣೆ ಪೊಲೀಸರು ಥಿಯೇಟರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳಾ ಟೆಕ್ಕಿ ತನ್ನ ಸ್ನೇಹಿತೆಯರ ಜೊತೆ ಭಾನುವಾರ ಸಂಧ್ಯಾ ಥಿಯೇಟರ್ ಗೆ ಸಿನಿಮಾಗೆ ಹೋಗಿದ್ದರು. ಈ ವೇಳೆ ಮಹಿಳಾ ಟೆಕ್ಕಿ ಹಾಗೂ ಆಕೆಯ ಸ್ನೇಹಿತೆಯರು ಶೌಚಾಲಯಕ್ಕೆ ಹೋಗಿದ್ದರು. ಆಗ ಬಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

View this post on Instagram

A post shared by Kannada Dunia (@kannada_dunia_official)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular