Video | ಕುಡಿದು ಬಂದ ಶಿಕ್ಷಕರ ಅವಾಂತರ; ವಿಚಾರಣೆಗೆ ಬಂದ ಪೊಲೀಸನಿಂದಲೂ ಮದ್ಯ ಸೇವನೆ

ಶಾಲಾ ಅವಧಿಯಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಾಂಶುಪಾಲ ಹಾಗೂ ಶಿಕ್ಷಕನನ್ನು ಬಂಧಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ನಳಂದಾ ಪ್ರದೇಶದಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರಾಂಶುಪಾಲ ನಾಗೇಂದ್ರ ಪ್ರಸಾದ್ ಮತ್ತು ಶಿಕ್ಷಕ ಸುಬೋಧ್ ಕುಮಾರ್ ಶಾಲೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಕಂಡ ಗ್ರಾಮಸ್ಥರಿಗೆ ಅನುಮಾನ ಮೂಡಿಸಿತ್ತು. ಈ ಪೈಕಿ ಶಿಕ್ಷಕನನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು ಎಂಬ ಸಂಗತಿ ಬಹಿರಂಗವಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಉಭಯ ಶಿಕ್ಷಕರುಗಳ ವರ್ತನೆ ಕುರಿತು ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅವರುಗಳು ಅನುಚಿತವಾಗಿ ವರ್ತಿಸಲು ಆರಂಭಿಸಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಮಾಷೆಯ ಸಂಗತಿ ಎಂದರೆ ಅವರನ್ನು ಕರೆದುಕೊಂಡು ಹೋಗಲು ಬಂದ ಪೊಲೀಸ್ ಕೂಡ ಮದ್ಯ ಸೇವಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದಾಗ ವಿಷಯ ಮತ್ತೊಂದು ತಿರುವು ಪಡೆದಿದೆ. ಈ ಸಂದರ್ಭ ಕೆಲಕಾಲ ಮಾತಿನ ಚಕಮಕಿ ನಡೆದು ಪೊಲೀಸ್‌ ನನ್ನು ಠಾಣೆಗೆ ವಾಪಸ್ ಕಳುಹಿಸಲಾಯಿತು.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ಬಂಧಿತ ಶಿಕ್ಷಕ ಮತ್ತು ಪ್ರಾಂಶುಪಾಲರನ್ನು ಕರೆದುಕೊಂಡು ಹೋಗುವುದನ್ನು ಇದರಲ್ಲಿ ನೋಡಬಹುದು. ಇವರಿಬ್ಬರು ಅಮಲೇರಿದ ಸ್ಥಿತಿಯಲ್ಲಿದ್ದಾರೆ. ‘ಈ ಶಾಲೆಯಲ್ಲಿ ಮದ್ಯಪಾನ ಮಾಡುವವರು ಯಾರು ?’ ಎಂದು ಕೇಳಿದಾಗ ವಿದ್ಯಾರ್ಥಿಗಳು ಇಬ್ಬರ ಹೆಸರನ್ನು ಹೇಳುವುದನ್ನು ವೀಡಿಯೊ ತೋರಿಸುತ್ತದೆ.

ಪ್ರಸಾದ್ ಮತ್ತು ಕುಮಾರ್ ಅವರನ್ನು ವಶಕ್ಕೆ ಪಡೆದ ನಂತರ ಪೊಲೀಸರು ಮದ್ಯಪಾನ ಮಾಡಿದ್ದನ್ನು ಪರಿಶೀಲಿಸಿದರು. ಪೊಲೀಸರ ಪ್ರಕಾರ, ಅವರನ್ನು ಈಗ ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read