ಹುಡುಗಿ ಊಟ ಸವಿಯುತ್ತಿದ್ದಾಗ ಪಕ್ಕದಲ್ಲಿತ್ತು ಹೆಬ್ಬಾವು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಐಷಾರಾಮಿ ಹೋಟೆಲ್‌ ಒಂದರಲ್ಲಿ ಇಬ್ಬರು ಹುಡುಗಿಯರೊಂದಿಗೆ ಹೆಬ್ಬಾವು ಊಟ ಮಾಡುತ್ತಿರುವ ನೋಡಲು ಭಯಾನಕ ಎನಿಸುವ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಇಬ್ಬರು ಹುಡುಗಿಯರು ಆಹಾರ ಸೇವಿಸುತ್ತಿರುವುದು ಕಂಡುಬರುತ್ತದೆ. ಈ ಹೋಟೆಲ್​ನಲ್ಲಿ ಜನರು ಕೂಡ ಸಿಕ್ಕಾಪಟ್ಟೆ ಇದ್ದಾರೆ.

ವಿಡಿಯೋದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಹೆಬ್ಬಾವು ಹುಡುಗಿಯರ ಮುಂದೆ ಮೇಜಿನ ಮೇಲೆ ಇರುವುದನ್ನುನೋಡಬಹುದು. ಹುಡುಗಿಯರ ಮುಂದೆ ರುಚಿಕರ ಖಾದ್ಯ ಇವೆ. ಆಗಲೇ ಹುಡುಗಿಯೊಬ್ಬಳು ತನ್ನ ಚಮಚದಿಂದ ಹೆಬ್ಬಾವಿಗೆ ಆಹಾರವನ್ನು ನೀಡುತ್ತಿರುವುದನ್ನು ಕಾಣಬಹುದು.

ಹೆಬ್ಬಾವು ಕೂಡ ಅವರ ಜೊತೆಯಲ್ಲಿ ಊಟ ತಿಂದು ಆನಂದಿಸುತ್ತಿದೆ. ಇದರ ನಂತರ ಇನ್ನೊಂದು ಬದಿಯಲ್ಲಿರುವ ಇನ್ನೊಬ್ಬ ಹುಡುಗಿಯ ತಟ್ಟೆಯನ್ನು ನೋಡಲು ಹೆಬ್ಬಾವು ಪ್ರಾರಂಭಿಸುತ್ತದೆ. ಅವಳು ಸಹ ಅದಕ್ಕೆ ತಿನಿಸುತ್ತಾಳೆ. ಹೀಗೆ ಮೂವರು ಡಿನ್ನರ್‌ ಎಂಜಾಯ್‌ ಮಾಡುವುದನ್ನು ಕಾಣಬಹುದು. ಇದನ್ನು ನೋಡಿ ನೆಟ್ಟಿಗರು ಬೆರಗಾಗುತ್ತಿದ್ದು, ಇದು ನಿಜವಾದ ಹಾವು ಹೌದೋ ಅಲ್ಲವೋ ಎನ್ನುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read