Watch Video | ಗಟ್ಟಿಗಿತ್ತಿ ಅಜ್ಜಿಯ ಧೈರ್ಯ ಕಂಡು ಹುಬ್ಬೇರಿಸಿದ ನೆಟ್ಟಿಗರು

ಪಟಾಕಿಗಳನ್ನು ಕೈಯಲ್ಲಿ ಹಿಡಿದೇ ಸಿಡಿಸುತ್ತಿರುವ ಅಜ್ಜಿಯೊಬ್ಬರು ’ಸೂಪರ್‌ ಅಮ್ಮ’ ಎಂದು ಖ್ಯಾತಿ ಪಡೆದಿದ್ದಾರೆ. ಪಟಾಕಿಗಳನ್ನು ಕೈಗಳು ಹಾಗೂ ಮುಖದಿಂದ ಸಾಧ್ಯವಾದಷ್ಟು ದೂರ ಇಡಬೇಕೆಂದು ಬಹಳಷ್ಟು ಬಾರಿ ಎಚ್ಚರಿಕೆಗಳನ್ನು ನೋಡುತ್ತಲೇ ಇರುತ್ತೇವೆ.

ಆದರೆ ಈ ಹಿರಿಯ ಮಹಿಳೆ ತಮ್ಮೊಳಗಿನ ಅದಮ್ಯ ಉತ್ಸಾಹದಿಂದ ಈ ಮಟ್ಟದ ಧೈರ್ಯ ತೋರಿರುವ ವಿಡಿಯೋ ನೋಡಿದ ನೆಟ್ಟಿಗರು ’ಅಬ್ಬಾ’ ಎಂದು ಉದ್ಗಾರ ತೆಗೆದಿದ್ದಾರೆ.

ಹಳದಿ ಸೀರೆಯಲ್ಲಿ ಮಿಂಚುತ್ತಿರುವ ಈ ಗಟ್ಟಿಗಿತ್ತಿ ಅಜ್ಜಿ ತನ್ನ ಮನೆಯ ಮುಂದಿನ ಬೀದಿಯಲ್ಲಿ ಪಟಾಕಿಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡೇ ಸಿಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪಟಾಕಿಯ ಸರವನ್ನು ವೃತ್ತಾಕಾರದಲ್ಲಿ ಸುತ್ತಿಸುವ ಸ್ಟಂಟ್‌ ಅನ್ನೂ ಬರಿಗಾಲಿನ ಮೇಲೆಯೇ ನಿಂತು ಮಾಡಿದ್ದಾರೆ.

ಅಜ್ಜಿಯ ಈ ಬಿಂದಾಸ್ ಸ್ಟಂಟ್‌ ಅನ್ನು ನೋಡಿದ ದಾರಿಹೋಕರು ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 75,000 ವೀಕ್ಷಣೆಗಳನ್ನು ಕಂಡಿರುವ ಈ ವಿಡಿಯೋಗೆ 5,000ಕ್ಕೂ ಹೆಚ್ಚಿನ ಲೈಕ್ಸ್‌ಗಳು ಸಿಕ್ಕಿವೆ.

https://www.youtube.com/watch?v=vTotc-rihEo&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read