ಕಾಗೆಯನ್ನು ರಕ್ಷಿಸಿದ ಪುಟ್ಟ ಬಾಲಕ: ಕ್ಯೂಟ್‌ ವಿಡಿಯೋ‌ ವೈರಲ್

ಪುಟಾಣಿ ಮಕ್ಕಳು ಮುಗ್ಧ ಮನಸ್ಸಿನಿಂದ ಮಾಡೋ ಕೆಲ ಕೆಲಸಗಳು, ದೊಡ್ಡವರಿಗೆ ದೊಡ್ಡ ಪಾಠವನ್ನೇ ಕಲಿಸಿರುತ್ತೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ನೋಡ್ತಿದ್ರೆ, ಆ ಮಾತು ಸತ್ಯ ಅಂತ ಅನ್ನಿಸದೇ ಇರೋಲ್ಲ.

ಈ ವಿಡಿಯೋದಲ್ಲಿ ಕಾಗೆಯೊಂದು ಬಲೆಯಲ್ಲಿ ಸಿಕ್ಕಾಕಿಕೊಂಡಿರುತ್ತೆ. ಅದನ್ನ ನೋಡಿದ ವಿದ್ಯಾರ್ಥಿಯೊಬ್ಬ, ಆ ಕಾಗೆಯನ್ನ ಬಲೆಯಿಂದ ಹೊರಗೆ ತೆಗೆಯುತ್ತಾನೆ. ಅಲ್ಲೇ ಆಟ ಆಡುತ್ತಿದ್ದ ಉಳಿದ ಮಕ್ಕಳು ಅದನ್ನ, ಕಾಗೆ ಅಂತ ದೂರ ಇಡದೇ , ಒಬ್ಬರಾದ ಮೇಲೆ ಇನ್ನೊಬ್ಬರು ಪ್ರೀತಿಯಿಂದ ಸವರುತ್ತಾರೆ. ಕೆಲ ಸಮಯದ ನಂತರ ಆ ಕಾಗೆ ಹಾರಿ ಹೋಗುತ್ತೆ.

ಈ ವಿಡಿಯೋ ನೋಡ್ತಿದ್ರೆ ಆ ಪುಟಾಣಿಗಳಿಗೂ ಗೊತ್ತು ಪಕ್ಷಿಗಳಿಗೂ ಜೀವ ಇದೆ. ಅವುಗಳಿಗೂ ಪ್ರೀತಿಯ ಅವಶ್ಯಕತೆ ಇದೆ ಅನ್ನೊದು. ಆದರೆ ದೊಡ್ಡವರು ಅದು ಕಾಗೆ, ಅಪಶಕುನ ಅಂತ ಮಟ್ಟಿದರೇನೇ ಸ್ನಾನ ಮಾಡುತ್ತಾರೆ. ಆದರೆ ನಿಷ್ಕಲ್ಮಶದ ಮಕ್ಕಳ ಮನಸ್ಸಿನಲ್ಲಿ ಆ ರೀತಿಯ ಯೋಚನೆಗಳೇ ಬಂದಿರಲಿಲ್ಲ. ಈ ಒಂದು ಘಟನೆ ಅನೇಕರಿಗೆ ಪಾಠ ಹೇಳಿದ ಹಾಗಿದೆ.

ಸಬೀತಾ ಚಂದಾ ಅನ್ನುವವರು ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಈ ವಿಡಿಯೋ ಶೀರ್ಷಿಕೆಯಲ್ಲಿ ’ ಅಸಂಖ್ಯ ಮನಸ್ಸಿಗೆ ಸ್ಪಂದಿಸಿದ ನಿಷ್ಕಲ್ಮಶದ ಹೃದಯ’ ಎಂದಿ ಬರೆದುಕೊಂಡಿದ್ದಾರೆ.

ಸದ್ಯಕ್ಕೆ ವಿಡಿಯೋವನ್ನು 26 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದವರು ವಿದ್ಯಾರ್ಥಿ ಮಾಡಿರುವ ಕೆಲಸಕ್ಕೆ ಶ್ಲಾಘಿಸಿದ್ದಾರೆ.

ಒಬ್ಬರು ವಿದ್ಯಾರ್ಥಿಯ ಮುಗ್ಧತೆಗೆ ನಾನು ಸೋತಿದ್ದೇನೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಅಪರೂಪದ ಮಗು ಎಂದು ಹೇಳಿದ್ದಾರೆ.

ಹಾಗೆ ಇನ್ನೊಬ್ಬರು ’ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿʼ ಎಂದು ಬರೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ತಮ್ಮ ಭಾವನೆಯನ್ನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಸಖತ್‌ ವೈರಲ್ ಆಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read