ಚಿಕ್ಕಪ್ಪ – ಸೋದರಳಿಯನ ಭೀಕರ ಜಗಳಕ್ಕೆ ಸಾಕ್ಷಿಯಾಯ್ತು ತರಕಾರಿ ಮಾರುಕಟ್ಟೆ….!

ಶಿಮ್ಲಾ: ಕಳೆದ ವಾರ ಶಿಮ್ಲಾದ ಗಂಜ್ ಬಜಾರ್ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮಾರಾಟಗಾರರು ಹಣ್ಣುಗಳನ್ನು ಹರಾಜು ಹಾಕುತ್ತಿದ್ದಾಗ ನಡೆದ ಗಲಾಟೆಯ ವಿಡಿಯೋ ವೈರಲ್​ ಆಗಿದೆ. ಚಿಕ್ಕಪ್ಪ ಮತ್ತು ಸೋದರಳಿಯ ನಡುವಿನ ಕೌಟುಂಬಿಕ ಕಲಹವೇ ಜಗಳಕ್ಕೆ ಪ್ರಮುಖ ಕಾರಣವಾಗಿ ಪರಿಸ್ಥಿತಿ ಕೈಮೀರಿತ್ತು.ಇದರ ವಿಡಿಯೋ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಮಾರಾಟಗಾರರು ಗಲಾಟೆಯಲ್ಲಿ ಪಾಲ್ಗೊಂಡು ಖಾಲಿ ತರಕಾರಿ ಬುಟ್ಟಿಗಳನ್ನು ಇತರರ ಮೇಲೆ ಎಸೆಯುವುದನ್ನು ನೋಡಬಹುದು. ಪೊಲೀಸರು ಮಾರುಕಟ್ಟೆಗೆ ಆಗಮಿಸಿ ಮಧ್ಯ ಪ್ರವೇಶಿಸಿದ ಬಳಿಕವೇ ಪರಿಸ್ಥಿತಿ ಹತೋಟಿಗೆ ತರಲಾಯಿತು.

ಒಬ್ಬ ವ್ಯಕ್ತಿಯು ಖಾಲಿ ತರಕಾರಿ ಬುಟ್ಟಿಯನ್ನು ಇನ್ನೊಬ್ಬರ ಮೇಲೆ ಎಸೆಯುವ ಮೂಲಕ ಈ ವಿಡಿಯೋ ಪ್ರಾರಂಭವಾಗುತ್ತದೆ. ಹಿನ್ನಲೆಯಲ್ಲಿಯೂ ಒಬ್ಬ ವ್ಯಕ್ತಿಯು ಉದ್ದನೆಯ ರಾಡ್‌ನಿಂದ ಇತರರನ್ನು ಹೊಡೆಯುವುದನ್ನು ನಾವು ನೋಡಬಹುದು.

ಸ್ವಲ್ಪ ಸಮಯದ ನಂತರ, 4-5 ಜನರು ತಂಡವನ್ನು ರಚಿಸುತ್ತಾರೆ ಮತ್ತು ಒಬ್ಬ ವ್ಯಕ್ತಿಯು ಇನ್ನೊಬ್ಬನನ್ನು ಒದೆಯುತ್ತಾನೆ. ಕೊನೆಯಲ್ಲಿ, ಒಬ್ಬ ಪೋಲೀಸ್ ಅಧಿಕಾರಿ ಮಧ್ಯಪ್ರವೇಶಿಸುತ್ತಾರೆ. ಈ ವಿಡಿಯೋ 1.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಥರಹೇವಾರಿ ಕಮೆಂಟ್​ ಬರುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read