ಒಂದೇ ಸ್ಕೂಟರ್ ಮೇಲೆ ಮೂವರು ಯುವಕರು ಪ್ರಯಾಣಿಸಿದ್ದಲ್ಲದೇ, ಹಿಂಬದಿಯ ಸವಾರರಿಬ್ಬರು ಪರಸ್ಪರ ಮುತ್ತಿಟ್ಟುಕೊಳ್ಳುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ರಾಮ್ಪುರದಲ್ಲಿ ಈ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, “ಈ ಟ್ವೀಟ್ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಸಂಚಾರೀ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ,” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಇಬ್ಬರು ಯುವತಿಯರು ದ್ವಿ-ಚಕ್ರ ವಾಹನವೊಂದರ ಮೇಲೆ ಪರಸ್ಪರ ಮುಖಾಮುಖಿಯಾಗಿ ಕುಳಿತು ಸವಾರಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೇ ವೇಳೆ, ಚಾಲನೆಯಲ್ಲಿದ್ದ ಬೈಕ್ ಮೇಲೆ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಮುತ್ತಿಕ್ಕಿಕೊಂಡಿದ್ದರು.
https://twitter.com/rampurpolice/status/1663883180666150912?ref_src=twsrc%5Etfw%7Ctwcamp%5Etweetembed%7Ctwterm%5E1663883180666150912%7Ctwgr%5Eaa33a6e32a3fea39be7b6a75bcc53df1735c369d%7Ctwcon%5Es1_&ref_url=https%3A%2F%2Fwww.freepressjournal.in%2Findia%2Futtar-pradesh-video-of-2-boys-kissing-on-bike-goes-viral-from-rampur-police-respond