HomeIndiaಎಸ್ಕೇಪ್ ಆಗುವ ವೇಳೆ ತನ್ನ ಚಹರೆ ಗೊತ್ತಾಗದಂತೆ ಛತ್ರಿ ಬಳಸಿದ್ದ ಅಮೃತಪಾಲ್ ಸಿಂಗ್...!

ಎಸ್ಕೇಪ್ ಆಗುವ ವೇಳೆ ತನ್ನ ಚಹರೆ ಗೊತ್ತಾಗದಂತೆ ಛತ್ರಿ ಬಳಸಿದ್ದ ಅಮೃತಪಾಲ್ ಸಿಂಗ್…!

ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿರುವ ಮೋಸ್ಟ್ ವಾಂಟೆಡ್ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ತನ್ನ ಮುಖ ಮರೆಮಾಚಲು ಛತ್ರಿ ಬಳಸಿದ್ದಾನೆ.

ಸೋಮವಾರ ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗ ತನಗೆ ಆಶ್ರಯ ನೀಡಿದ ಹರಿಯಾಣದ ಮಹಿಳೆಯ ಮನೆಯಿಂದ ಹೊರಹೋಗುವುದು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಈ ವೇಳೆ ಆತ ತನ್ನ ಮುಖವನ್ನು ಮರೆಮಾಚಲು ಛತ್ರಿಯನ್ನು ಹಿಡಿದುಕೊಂಡು, ಬಿಳಿ ಶರ್ಟ್ ಮತ್ತು ಕಡು ನೀಲಿ ಜೀನ್ಸ್ ನಲ್ಲಿ ಮನೆಯಿಂದ ಹೊರಟು ಹೋಗುವುದನ್ನು ದೃಶ್ಯಾವಳಿ ತೋರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರಿಯಾಣದ ಕುರುಕ್ಷೇತ್ರದಲ್ಲಿರುವ ತನ್ನ ಮನೆಯಲ್ಲಿ ಅಮೃತಪಾಲ್ ಸಿಂಗ್ ಮತ್ತು ಆತನ ಸಹಾಯಕ ಪಾಪಲ್ಪ್ರೀತ್ ಸಿಂಗ್ ಅವರಿಗೆ ಆಶ್ರಯ ನೀಡಿದ ಮಹಿಳೆ ಬಲ್ಜೀತ್ ಕೌರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಆತನನ್ನು ಬಂಧಿಸಲು ಪೊಲೀಸರು ತೆರಳಿದ ಎರಡು ದಿನಗಳ ನಂತರ ಆತ ಮಹಿಳೆಯ ಮನೆಯಿಂದ ಪರಾರಿಯಾಗಿದ್ದನ್ನ ಸಿಸಿ ಕ್ಯಾಮೆರಾ ವಿಡಿಯೋ ತೋರಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular