HomeLatest Newsಸಮುದ್ರದಾಳದಲ್ಲಿ ಮಂಡಿಯೂರಿ ಪ್ರಪೋಸ್ ಮಾಡಿದ ಕರಣ್ ಕುಂದ್ರಾ: ತೇಜಸ್ವಿ ಪ್ರಕಾಶ್ ಜೊತೆಗಿನ ರೊಮ್ಯಾಂಟಿಕ್ ವೀಡಿಯೋ ವೈರಲ್!

ಸಮುದ್ರದಾಳದಲ್ಲಿ ಮಂಡಿಯೂರಿ ಪ್ರಪೋಸ್ ಮಾಡಿದ ಕರಣ್ ಕುಂದ್ರಾ: ತೇಜಸ್ವಿ ಪ್ರಕಾಶ್ ಜೊತೆಗಿನ ರೊಮ್ಯಾಂಟಿಕ್ ವೀಡಿಯೋ ವೈರಲ್!

ಕಿರುತೆರೆಯ ಜನಪ್ರಿಯ ಜೋಡಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಮತ್ತೆ ತಮ್ಮ ರೊಮ್ಯಾಂಟಿಕ್ ವೀಡಿಯೋ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪ್ರಸ್ತುತ ಮಾರಿಷಸ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ಈ ಜೋಡಿ, ಸಮುದ್ರದ ಆಳದಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಾ ಒಬ್ಬರಿಗೊಬ್ಬರು ಪ್ರೀತಿ ವ್ಯಕ್ತಪಡಿಸಿರುವ ಸುಂದರ ಕ್ಷಣಗಳ ವೀಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ತಮ್ಮ ಪ್ರವಾಸದ ವ್ಲಾಗ್ ಹಂಚಿಕೊಂಡಿರುವ ಕರಣ್ ಕುಂದ್ರಾ, ಸಮುದ್ರದಾಳದ ನೀರೊಳಗಿನ ಪ್ರಪಂಚವನ್ನು ಅನ್ವೇಷಿಸುತ್ತಾ ತೇಜಸ್ವಿ ಅವರಿಗೆ ವಿಶಿಷ್ಟವಾಗಿ ಪ್ರಪೋಸ್ ಮಾಡಿದ್ದಾರೆ. ಮೊದಲು ನೀರಿನಲ್ಲಿ ಕೈಗಳಿಂದ ಹೃದಯದ ಆಕಾರ ರೂಪಿಸಿದ ಕರಣ್, ನಂತರ ಮಂಡಿಯೂರಿ ನಿಂತು ವಿವಾಹವಾಗುವಂತೆ ಸನ್ನೆಗಳ ಮೂಲಕ ಕೇಳಿಕೊಂಡಿದ್ದಾರೆ.

ಸಮುದ್ರದಾಳದಲ್ಲಿ ಮಾತನಾಡಲು ಸಾಧ್ಯವಾಗದ ಕಾರಣ ಸೈನ್ಯೆಗಳ ಮೂಲಕವೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕರಣ್ “ಐ ಲವ್ ಯು” ಎಂದು ಸನ್ನೆ ಮಾಡಿದಾಗ ತೇಜಸ್ವಿ ಮುಗುಳುನಗುವಿನೊಂದಿಗೆ ಸ್ಪಂದಿಸಿದ್ದಾರೆ. ಈ ಸುಂದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಇದನ್ನು ‘ಸಿನಿಮಾ ಮಾದರಿಯ ಪ್ರಪೋಸಲ್’ ಎಂದು ಬಣ್ಣಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಗ್ ಬಾಸ್ ೧೫ ರಿಯಾಲಿಟಿ ಶೋ ಸಮಯದಲ್ಲಿ ಪ್ರೀತಿಗೆ ಬಿದ್ದ ಈ ಜೋಡಿ, ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಪ್ರಸ್ತುತ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದು, ಲಾಗ್ಟರ್ ಚೆಫ್ಸ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular