ಹೈದರಾಬಾದ್‌ನ ಕಂಚನ್‌ಬಾಗ್‌ನ ಬಾಬಾ ನಗರದಲ್ಲಿ ಬುಧವಾರ ರಾತ್ರಿ ನಡೆದ ಆಘಾತಕಾರಿ ಘಟನೆಯಲ್ಲಿ, ದಿನಸಿ ಅಂಗಡಿ ನಡೆಸುತ್ತಿದ್ದ ವೃದ್ಧರೊಬ್ಬರನ್ನು ಯುವಕರ ಗುಂಪೊಂದು ಸಣ್ಣ ವಿಚಾರಕ್ಕೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಮಾಡಿದೆ.
ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗಿದೆ. ವರದಿಗಳ ಪ್ರಕಾರ, ಬಾಬಾ ನಗರದ ‘ಸಿ ಬ್ಲಾಕ್’ ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ 62 ವರ್ಷದ ಜಾಕಿರ್ ಖಾನ್, ಪಾನ್ ಅಂಗಡಿ ಮಾಲೀಕರೊಬ್ಬರ ಗ್ರಾಹಕರು ತಮ್ಮ ಅಂಗಡಿ ಮುಂದೆ ಕುರ್ಚಿಗಳನ್ನು ಹಾಕಿ ಕುಳಿತಿದ್ದರಿಂದ ಜಗಳವಾಡಿದ್ದಾರೆ.
ಇದನ್ನು ವಿರೋಧಿಸಿದ ಜಾಕಿರ್ ಖಾನ್, ಕುರ್ಚಿಗಳನ್ನು ತೆಗೆಯುವಂತೆ ಕೇಳಿದಾಗ, ಯುವಕರ ಗುಂಪೊಂದು ಅವರಿಗೆ ಥಳಿಸಿ, ಮುಖ ಮತ್ತು ಎದೆಗೆ ಪಂಚ್ ಮಾಡಿ, ಕೆಳಗೆ ತಳ್ಳಿದೆ. ಜಾಕಿರ್ ಗಾಯಗೊಂಡು ಸಾವನ್ನಪ್ಪಿದ್ದಾರೆ. 2016 ರಲ್ಲಿ ಜಾಕಿರ್ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು ಎಂದು ವರದಿಗಳು ತಿಳಿಸಿವೆ. ಅವರ ಇಬ್ಬರು ಪುತ್ರರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
సీసీటీవీ ఫుటేజ్
ఓల్డ్ సిటీలో షాపు ముందు కూర్చోవద్దని అన్నందుకు వృద్ధుడిని కొట్టి చంపిన యువకులు
కాంచన్బాగ్ పీఎస్ పరిధిలోని బాబా నగర్లో కిరాణా దుకాణం నడుపుతున్న జాకీర్ ఖాన్(62) షాపు ముందు నిన్న రాత్రి కుర్చీలు వేసి కస్టమర్లను కూర్చోబెట్టిన పక్కన ఉన్న పాన్ షాప్ యజమానులు
తన… pic.twitter.com/QmygBxlOTS
— Telugu Scribe (@TeluguScribe) March 13, 2025