ಮಧ್ಯಪ್ರದೇಶದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಯುವಕನೊಬ್ಬ ನಿರ್ಭೀತಿಯಿಂದ ಸಬ್‌ಇನ್‌ಸ್ಪೆಕ್ಟರ್‌ಗೆ ಥಳಿಸಿದ್ದಾನೆ. ಇಂದೋರ್‌ನಲ್ಲಿ ನಡೆದಿರುವ ಘಟನೆಯು ಬೆಚ್ಚಿ ಬೀಳಿಸಿದ್ದು, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಘಟನೆಯ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಪೋಲೀಸರು ಕೂಡ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಅಸಹಾಯಕರಂತೆ ನಿಂತಿದ್ದರು.
ಜನನಿಬಿಡ ನಗರ ನಿಗಮ್ ಸ್ಕ್ವೇರ್‌ನಲ್ಲಿ ಪೊಲೀಸ್ ನ ಥಳಿಸುತ್ತಿರುವುದನ್ನು ನೋಡಿದ ಸಾರ್ವಜನಿಕರು ದಿಗ್ಭ್ರಮೆಗೊಂಡರು. ಈ ವೇಳೆ ಆರೋಪಿಯನ್ನು ಆತನ ಇತರ ಗೆಳೆಯರು ಹೊಡೆಯುತ್ತಿದ್ದರು. ಘಟನೆಯ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, “ಯೇ ದೇಖೋ…….ಯೇ ಹೈ ಇಂದೋರ್ ಕಿ ಪೋಲೀಸ್.” ಎಂದು ಪೊಲೀಸರನ್ನು ಗೇಲಿ ಮಾಡಿದ್ದಾರೆ.
ವೀಡಿಯೋದಲ್ಲಿರುವ ಆರೋಪಿ ಕುಡುಕನಂತೆ ಕಂಡಿದ್ದು, ನಿಲ್ಲಲೂ ಕೂಡ ಆತನಲ್ಲಿ ಶಕ್ತಿಯಿರಲಿಲ್ಲ. ಪೊಲೀಸ್ ಅಧಿಕಾರಿಯ ಶರ್ಟ್ ನ ಕಾಲರ್ ಹಿಡಿದು ಅವರನ್ನು ಎಳೆದಾಡಿದ್ದಾನೆ. ಅಧಿಕಾರಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಜಟಾಪಟಿಯಲ್ಲಿ ಅವರ ಸಮವಸ್ತ್ರ ಹರಿದಿತ್ತು.
ಪೊಲೀಸ್ ಪ್ರಕಾರ ಸಬ್ ಇನ್ಸ್ ಪೆಕ್ಟರ್ ನಾಥುರಾಮ್ ದೋಹ್ರೆ (62) ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳಾದ ಆಶಿಶ್ ಮತ್ತು ಅತುಲ್ ಅವರು ನಗರ ನಿಗಮ್ ನಲ್ಲಿ ಟ್ರಾಫಿಕ್ ನಿರ್ವಹಿಸುತ್ತಿದ್ದಾಗ ಇಬ್ಬರು ವ್ಯಕ್ತಿಗಳ ನಡುವೆ ವಿವಾದ ಉಂಟಾಗಿ ಟ್ರಾಫಿಕ್ ಜಾಮ್ ಆಗಿತ್ತು.
ಸಬ್ ಇನ್ಸ್ ಪೆಕ್ಟರ್ ನಾಥುರಾಮ್ ದೋಹ್ರೆ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದಾಗ, ಅವರಲ್ಲಿ ಒಬ್ಬರು ಸಬ್ ಇನ್ಸ್ ಪೆಕ್ಟರ್ ನೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಎಸ್‌ಐ ದೋಹ್ರೆ ಅವರ ಕಾಲರ್ ಹಿಡಿದು ಎಳೆಯಲು ಆರಂಭಿಸಿದರು. ಎರಡನೇ ವ್ಯಕ್ತಿ ಸಬ್ ಇನ್ಸ್ ಪೆಕ್ಟರ್‌ಗೆ ಸಹಾಯ ಮಾಡಲು ಮುಂದಾದರೆ, ದಾಳಿಕೋರನು ಅಧಿಕಾರಿಯೊಂದಿಗೆ ಹೋರಾಟವನ್ನು ಮುಂದುವರೆಸಿದನು.
ಇತರರು ಪ್ರಯತ್ನಿಸಿದರೂ, ಹಲ್ಲೆಕೋರನು ಸಬ್ ಇನ್ಸ್ ಪೆಕ್ಟರ್‌ನನ್ನು ಬಿಡಲಿಲ್ಲ. ಅಧಿಕಾರಿಯನ್ನು ನೆಲಕ್ಕೆ ತಳ್ಳಿದ್ದರಿಂದ ಅವರ ಮೊಬೈಲ್, ವಾಕಿಟಾಕಿ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾದವು. ಎಂಜಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
https://twitter.com/FreePressMP/status/1833413095542411378?ref_src=twsrc%5Etfw%7Ctwcamp%5Etweetembed%7Ctwterm%5E1833413095542411378%7Ctwgr%5Eb324470d8ee02079633f85cb76f323baba41652b%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefr