ಚಿಕಿತ್ಸೆಗೆ ತೆರಳಿದ್ದ ಯುವತಿಯ ಟಾಪ್ ಲೆಸ್ ವಿಡಿಯೋ ರೆಕಾರ್ಡ್

ಬೆಂಗಳೂರು: ಕಾಸ್ಮೋಟಿಕ್ ಸೆಂಟರ್ ಒಂದರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರಿನ ನವರಂಗ್ ಸಮೀಪ ಇರುವ ಕಾಸ್ಮೋಟಿಕ್ ಸೆಂಟರ್ ನಲ್ಲಿ ಚಿಕಿತ್ಸೆಗೆ ತೆರಳಿದ್ದ ಯುವತಿಯ ಟಾಪ್ ಲೆಸ್ ವಿಡಿಯೋ ರೆಕಾರ್ಡ್ ಮಾಡಿದ ಆರೋಪ ಕೇಳಿ ಬಂದಿದೆ.

ಕಳೆದ ತಿಂಗಳು ಬೊಜ್ಜು ಕಳೆದುಕೊಳ್ಳಲು ಯುವತಿ ಕ್ರಿನಿಕ್ ಗೆ ಹೋಗಿದ್ದಳು. ಚೆಕಪ್ ಮಾಡಲು ಯುವತಿಯನ್ನು ಸಿಬ್ಬಂದಿ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಡಾಕ್ಟರ್ ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಚೆಕಪ್ ಮಾಡಿದ್ದರು. ಸಿಬ್ಬಂದಿ ಸೂಚನೆಯಂತೆ ಯುವತಿ ಟಾಪ್ ತೆಗೆದು ಚೆಕಪ್ ಮಾಡಿಸಿಕೊಂಡಿದ್ದಳು.

ಮನೆಗೆ ಹೋದ ನಂತರ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಇರುವುದು ನೆನಪಾಗಿತ್ತು. ರೋಗಿಗಳ ಚೆಕಪ್ ಕೊಠಡಿಯಲ್ಲಿಯೂ ಸಿಸಿಟಿವಿ ಅಳವಡಿಸಿದ್ದ ಆರೋಪವಿದ್ದು, ಕೂಡಲೇ ತಮ್ಮ ಸಹೋದರನ ಮೂಲಕ ಯುವತಿ ಕ್ಲಿನಿಕ್ ಗೆ ಫೋನ್ ಮಾಡಿಸಿದ್ದಾಳೆ.

ಫೋನ್ ಮಾಡಿ ದೃಶ್ಯ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಕ್ಲಿನಿಕ್ ಸಿಬ್ಬಂದಿ ದೃಶ್ಯ ಡಿಲೀಟ್ ಮಾಡಲು ನಿರಾಕರಿಸಿದ ಆರೋಪ ಕೇಳಿ ಬಂದಿದೆ. ಸರ್ಕಾರದಿಂದ ಸಿಸಿಟಿವಿ ಅಳವಡಿಸಲು ಆದೇಶವಿದೆ ಎಂದು ಹೇಳಿದ್ದಾರೆ.

ಹೀಗಾಗಿ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಿದ ಆರೋಪದಡಿ ಠಾಣೆಗೆ ದೂರು ನೀಡಲಾಗಿದೆ. ಯುವತಿ ದೂರಿನ ಮೇರೆಗೆ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಐಟಿ ಕಾಯ್ದೆ 2008ರ ಅಡಿ ಎಫ್ಐಆರ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read