HomeAutoನೋಯ್ಡಾದಲ್ಲಿ 'ಥಾರ್' ಚಾಲಕನ ಪುಂಡಾಟ: ವಾಹನಗಳಿಗೆ ಗುದ್ದಿ ಎಸ್ಕೇಪ್ | Video

ನೋಯ್ಡಾದಲ್ಲಿ ‘ಥಾರ್’ ಚಾಲಕನ ಪುಂಡಾಟ: ವಾಹನಗಳಿಗೆ ಗುದ್ದಿ ಎಸ್ಕೇಪ್ | Video

ನೋಯ್ಡಾದ ಸೆಕ್ಟರ್ 16 ಕಾರ್ ಮಾರ್ಕೆಟ್‌ನಲ್ಲಿ ಸೋಮವಾರ ವಿಚಿತ್ರ ಘಟನೆಯೊಂದು ನಡೆದಿದೆ. ಕಪ್ಪು ಬಣ್ಣದ ‘ಥಾರ್’ ಕಾರು ತಪ್ಪು ದಾರಿಯಲ್ಲಿ ಬಂದು ನಿಲ್ಲಿಸಿದ್ದ ಗಾಡಿಗಳಿಗೆ ಡಿಕ್ಕಿ ಹೊಡೆದು, ಅಲ್ಲಿಂದ ವೇಗವಾಗಿ ಪರಾರಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ‘ಥಾರ್’ ಕಾರು ಸಣ್ಣ ರಸ್ತೆಯ ತಪ್ಪು ದಾರಿಯಲ್ಲಿ ವೇಗವಾಗಿ ಬರುವುದನ್ನ ಕಾಣಬಹುದು. ಕಾರು ಬರುವಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಅಲ್ಲಿ ನಿಂತಿದ್ದ ಜನರು ಭಯದಿಂದ ಓಡಿ ಹೋಗಿದ್ದಾರೆ. ‘ಥಾರ್’ ಕಾರು ಒಂದು ಬೋರ್ಡ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅದು ಕೆಳಗೆ ಬಿದ್ದಿದೆ. ನಂತರ ಕಾರು ವೇಗವಾಗಿ ಅಲ್ಲಿಂದ ಪರಾರಿಯಾಗಿದೆ. ಈಗ ಪೊಲೀಸರು ಆ ಕಾರಿನ ಚಾಲಕನನ್ನ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular