Video | ‘ವಂದೇ ಭಾರತ್’ ರೈಲಿಗೆ ಹಸಿರು ನಿಶಾನೆ ತೋರುವ ವೇಳೆ ಅವಘಡ; ಕಿಕ್ಕಿರಿದ ಜನರ ನಡುವೆ ಆಯತಪ್ಪಿ ಹಳಿ ಮೇಲೆ ಬಿದ್ದ ಶಾಸಕಿ

ಪ್ರಧಾನಿ ನರೇಂದ್ರ ಮೋದಿ ನಿನ್ನೆ 6 ವಂದೇ ಭಾರತ್ ರೈಲುಗಳಿಗೆ ಆನ್ ಲೈನ್ ಮೂಲಕ ಚಾಲನೆ ನೀಡಿದರು. ಇದರ ಭಾಗವಾಗಿ ಆಗ್ರಾ-ವಾರಣಾಸಿ ವಂದೇ ಭಾರತ್ ಎಕ್ಸ್ ಪ್ರೆಸ್‌ಗೆ ಹಸಿರು ನಿಶಾನೆ ತೋರುವ ವೇಳೆ ಬಿಜೆಪಿಯ ಇಟಾವಾ ಶಾಸಕಿ ಸರಿತಾ ಬದೌರಿಯಾ ರೈಲ್ವೆ ಹಳಿಗಳ ಮೇಲೆ ಬಿದ್ದ ಘಟನೆ ನಡೆಯಿತು.

ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ರೈಲು ಆಗಮಿಸುತ್ತಿದ್ದಂತೆ ಕಿಕ್ಕಿರಿದ ಪ್ಲಾಟ್‌ಫಾರ್ಮ್ ನಲ್ಲಿ ರೈಲಿಗೆ ಹಸಿರು ನಿಶಾನೆ ತೋರುವಾಗ ಈ ಅವಘಡ ಸಂಭವಿಸಿತು. 61 ವರ್ಷದ ಶಾಸಕಿ ಜನರ ಮಧ್ಯೆ ಸಿಲುಕಿ ಕೆಳಗೆ ಬೀಳ್ತಿದ್ದಂತೆ ತಕ್ಷಣ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ.

ಇಟಾವಾ ನಿಲ್ದಾಣಕ್ಕೆ ಬರುವ ಮೊದಲು ರೈಲು ತುಂಡ್ಲಾದಲ್ಲಿ ನಿಲುಗಡೆಯಾಗಿತ್ತು. ಬಳಿಕ ಇಲ್ಲಿಗೆ ಆಗಮಿಸಿದ ನಂತರ, ಸಮಾಜವಾದಿ ಪಕ್ಷದ ಸಂಸದ ಜಿತೇಂದ್ರ ದೌವ್ಹಾರೆ, ಬಿಜೆಪಿಯ ಮಾಜಿ ಸಂಸದ ರಾಮ್ ಶಂಕರ್ ಮತ್ತು ಹಾಲಿ ಶಾಸಕಿ ಸರಿತಾ ಬದೌರಿಯಾ ಸೇರಿದಂತೆ ವಿವಿಧ ರಾಜಕೀಯ ವ್ಯಕ್ತಿಗಳು ಹಸಿರು ನಿಶಾನೆ ತೋರಲು ಜಮಾಯಿಸಿದಾಗ ವೇದಿಕೆಯಲ್ಲಿ ಗದ್ದಲ ಉಂಟಾಗಿ ಈ ಅವಘಡ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ರೈಲನ್ನು ಸಕಾಲದಲ್ಲಿ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಬದೌರಿಯಾ ಅವರನ್ನು ಪೊಲೀಸರು ಹಳಿಗಳಿಂದ ಕೂಡಲೇ ರಕ್ಷಿಸಿದರು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು.

https://twitter.com/ians_india/status/1835682962936930439?ref_src=twsrc%5Etfw%7Ctwcamp%5Etweetembed%7Ctwterm%5E1835682962936930439%7Ctwgr%5E68644335a

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read