HomeSportsವಿಶ್ವಕಪ್ ಉದ್ಘಾಟನೆಗೂ ಮುನ್ನವೇ ವೈರಲ್ ಆದ ಘಟನೆ: ಶಕೀರಾ ಜೊತೆ ಸೆಲ್ಫಿ ಪಡೆಯಲು ಲೈವ್ ಬ್ರಾಡ್‌ಕಾಸ್ಟ್...

ವಿಶ್ವಕಪ್ ಉದ್ಘಾಟನೆಗೂ ಮುನ್ನವೇ ವೈರಲ್ ಆದ ಘಟನೆ: ಶಕೀರಾ ಜೊತೆ ಸೆಲ್ಫಿ ಪಡೆಯಲು ಲೈವ್ ಬ್ರಾಡ್‌ಕಾಸ್ಟ್ ಬಿಟ್ಟ ಪತ್ರಕರ್ತ!

ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಸಮಾರಂಭಕ್ಕೆ ಇಡೀ ವಿಶ್ವವೇ ಕಾಯುತ್ತಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅರ್ಜೆಂಟೀನಾದ ಖ್ಯಾತ ಟಿವಿ ಪತ್ರಕರ್ತರೊಬ್ಬರು ಲೈವ್ ವರದಿ ಪ್ರಸಾರವಾಗುತ್ತಿದ್ದಾಗಲೇ ಮೈಕ್ ಕೆಳಗಿಟ್ಟು, ಜಾಗತಿಕ ಪಾಪ್ ಸೂಪರ್‌ಸ್ಟಾರ್ ಶಕೀರಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಓಡಿಹೋದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅರ್ಜೆಂಟೀನಾದ ಹಿರಿಯ ಕ್ರೀಡಾ ವರದಿಗಾರ ಮಾರ್ಸೆಲೊ ಬೆನೆಡೆಟ್ಟೊ ಮೆಕ್ಸಿಕೋ ಸಿಟಿಯಿಂದ ಲೈವ್ ಆಗಿ ವರದಿ ಮಾಡುತ್ತಿದ್ದರು. ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಕೇವಲ ಒಂದು ದಿನ ಬಾಕಿ ಇದ್ದ ಹಿನ್ನೆಲೆಯಲ್ಲಿ ಅವರು ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದರು. ಇದೇ ವೇಳೆ ಪಾಪ್ ಗಾಯಕಿ ಶಾಕೀರಾ ತಮ್ಮ ಸಿಬ್ಬಂದಿಯೊಂದಿಗೆ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಮಾರ್ಸೆಲೊ ಕಣ್ಣಿಗೆ ಬಿದ್ದಿದೆ.

ಶಾಕೀರಾ ಅವರನ್ನು ನೋಡಿದ ತಕ್ಷಣ ಪತ್ರಕರ್ತನಿಗೆ ತಮ್ಮ ಉತ್ಸಾಹವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ತಕ್ಷಣವೇ ಲೈವ್ ವರದಿಯನ್ನು ಮಧ್ಯದಲ್ಲೇ ನಿಲ್ಲಿಸಿದ ಅವರು, ಕೈಯಲ್ಲಿದ್ದ ಮೈಕ್ರೋಫೋನ್ ಅನ್ನು ಕೆಳಗಿಟ್ಟು ಕ್ಯಾಮೆರಾ ಫ್ರೇಮ್‌ನಿಂದ ಹೊರಗೆ ಓಡಿದ್ದಾರೆ. ನೇರವಾಗಿ ಶಾಕೀರಾ ಬಳಿ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಂಡ ನಂತರವೇ ಮರಳಿ ಬಂದು ತಮ್ಮ ಲೈವ್ ಪ್ರಸಾರವನ್ನು ಮುಂದುವರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳು ಹಾಗೂ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಪತ್ರಕರ್ತನಿಗೆ ತನ್ನ ವೃತ್ತಿಪರ ಜವಾಬ್ದಾರಿಗಿಂತ ಶಾಕೀರಾ ಮೇಲಿನ ಅಭಿಮಾನವೇ ಹೆಚ್ಚಾಯಿತು ಎಂದು ಹಲವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಪತ್ರಕರ್ತ ಮಾರ್ಸೆಲೊ ಬೆನೆಡೆಟ್ಟೊ ಅವರಿಗೆ ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಇಂತಹ ಕ್ರೇಜ್ ಇರುವುದು ಇದೇ ಮೊದಲೇನಲ್ಲ. ಈ ಹಿಂದೆ 2018ರಲ್ಲಿ ಕೈವ್‌ನಲ್ಲಿ ನಡೆದ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದ ವೇಳೆ ಪ್ರದರ್ಶನ ನೀಡಿದ್ದ ಗಾಯಕಿ ದುವಾ ಲಿಪಾ ಜೊತೆಯೂ ಅವರು ಹೀಗೆಯೇ ಫೋಟೋ ತೆಗೆಸಿಕೊಂಡು ವೈರಲ್ ಆಗಿದ್ದರು.

ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಶಾಕೀರಾ ಅವರು ಬರ್ನಾ ಬಾಯ್ ಜೊಗೂಡಿ “ಡೈ ಡೈ” ಹಾಡಿಗೆ ಭರ್ಜರಿ ಪ್ರದರ್ಶನ ನೀಡಲಿದ್ದಾರೆ. ಈ ಸ್ಟಾರ್ ಸ್ಟುಡೆಡ್ ಕಾರ್ಯಕ್ರಮದಲ್ಲಿ ಜೆ ಬಾಲ್ವಿನ್, ಟೈಲಾ, ಮಾನಾ, ಬೆಲಿಂಡಾ ಮತ್ತು ಲಿಲಾ ಡೌನ್ಸ್ ಸೇರಿದಂತೆ ಹಲವು ಜಾಗತಿಕ ಗಾಯಕರು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಪಂದ್ಯಾವಳಿ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಮಾರ್ಸೆಲೊ ಮತ್ತು ಶಾಕೀರಾ ಅವರ ಈ ಅನಿರೀಕ್ಷಿತ ಭೇಟಿ ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular