HomeKarnatakaVideo | ಮಾವಿನ ಅಂಗಡಿ ಮುಂದೆ ಬಾಲಕನ ಸಖತ್ ಡಾನ್ಸ್; ನೃತ್ಯದ ಮೂಲಕವೇ ಹಣ್ಣು ಖರೀದಿಸುವಂತೆ...

Video | ಮಾವಿನ ಅಂಗಡಿ ಮುಂದೆ ಬಾಲಕನ ಸಖತ್ ಡಾನ್ಸ್; ನೃತ್ಯದ ಮೂಲಕವೇ ಹಣ್ಣು ಖರೀದಿಸುವಂತೆ ವಾಹನ ಸವಾರರನ್ನು ಆಹ್ವಾನಿಸಿದ ಪೋರ

ಮೈಸೂರು: ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಮಾವಿನ ಹಣ್ಣಿನ ವ್ಯಾಪಾರಕ್ಕಾಗಿ ಬಾಲಕನೊಬ್ಬ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದ ದೃಶ್ಯ ಮೈಸೂರಿನಲ್ಲಿ ಕಂಡುಬಂದಿದೆ.

ಮೈಸೂರಿನಿಂದ ಹುಣಸೂರಿಗೆ ತೆರಳುವ ಇಲಾವಲ ಬಳಿ ರಸ್ತೆ ಪಕ್ಕದಲ್ಲಿ ಸಾಲು ಸಾಲು ಮಾವಿನ ಹಣ್ಣಿನ ಅಂಗಡಿಗಳು ಕಂಡುಬರುತ್ತವೆ. ಮಾವಿನ ಅಂಗಡಿ ಮುಂದೆ ಓರ್ವ ಬಾಲಕ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಗಮನ ಸೆಳೆದು, ಮಾವಿನ ಹಣ್ಣು ಖರೀದಿಸುವಂತೆ ಹೇಳುತ್ತಿದ್ದ ದೃಶ್ಯ ಎಲ್ಲರನ್ನೂ ನಿಬ್ಬೆರಗಾಗಿಸುವಂತಿದೆ. ಪುಟ್ಟ ಬಾಲಕನ ನೃತ್ಯ ಪ್ರತಿಭೆ ಎಲ್ಲರ ಗಮನ ಸೆಳೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular