HomeAutoVideo | ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ

Video | ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ

ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಬಿಳಿ ಬಣ್ಣದ ಟ್ರಕ್ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಅಂಗಡಿಯೊಂದರ ಹೊರಗೆ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಜನವರಿ 10 ರಂದು ನಡೆದ ಈ ಘಟನೆಯ ಸಿಸಿಕ್ಯಾಮೆರಾ ದೃಶ್ಯದ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ.

ಕಪ್ಪು ಸುಜುಕಿ ಸೆಡಾನ್ ಗೆ ಡಿಕ್ಕಿ ಹೊಡೆಯುವ ಮೊದಲು ಬಿಳಿ ಟ್ರಕ್ ರಸ್ತೆಯ ಉದ್ದಕ್ಕೂ ಚಲಿಸುತ್ತಿರುವುದನ್ನ ವೀಡಿಯೊ ತೋರಿಸುತ್ತದೆ. ವೀಡಿಯೊದಲ್ಲಿ ಟ್ರಕ್ ನಿಲ್ಲುವ ಮೊದಲು ಮಣ್ಣಿನ ರಸ್ತೆಯ ಉದ್ದಕ್ಕೂ ಚಲಿಸಿದೆ. ಡಿಕ್ಕಿ ಬಳಿಕ ಚಾಲಕ ಗಾಯಗೊಳ್ಳದೆ ಟ್ರಕ್‌ನಿಂದ ಕೆಳಗಿಳಿದಿದ್ದಾರೆ. ಘಟನೆಯ ವಿಡಿಯೋವನ್ನು ವೈರಲ್ ಪ್ರೆಸ್ ಬಿಡುಗಡೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular