HomeCrimeಮರ್ಮಾಂಗ ಕೊಯ್ದು ಹೊಲಿಗೆ ಹಾಕದೆಯೇ ಕಳಿಸಿದ್ರು ವಿಕ್ಟೋರಿಯಾ ವೈದ್ಯರ ನಿರ್ಲಕ್ಷ್ಯಕ್ಕೆ ಫುಟ್‌ಪಾತ್‌ನಲ್ಲೇ ಪ್ರಾಣಬಿಟ್ಟ ಡೆಲಿವರಿ ಬಾಯ್

ಮರ್ಮಾಂಗ ಕೊಯ್ದು ಹೊಲಿಗೆ ಹಾಕದೆಯೇ ಕಳಿಸಿದ್ರು ವಿಕ್ಟೋರಿಯಾ ವೈದ್ಯರ ನಿರ್ಲಕ್ಷ್ಯಕ್ಕೆ ಫುಟ್‌ಪಾತ್‌ನಲ್ಲೇ ಪ್ರಾಣಬಿಟ್ಟ ಡೆಲಿವರಿ ಬಾಯ್

ಬೆಂಗಳೂರು: ಬಡವರ ಪಾಲಿನ ಸಂಜೀವಿನಿ ಎನ್ನಲಾಗುವ ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲೀಗ ವೈದ್ಯರ ದಿವ್ಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ಮರ್ಮಾಂಗದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಯನ್ನೇ ಅಮಾನವೀಯವಾಗಿ ನಡೆಸಿ, ಸಾವಿಗೆ ತಳ್ಳಿರುವ ಗಂಭೀರ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಾ ನವಾಜ್ (45) ಎಂಬವರು ಮರ್ಮಾಂಗದಲ್ಲಿ ಗಡ್ಡೆ ಬೆಳೆದಿದ್ದರಿಂದ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಿದ ವೈದ್ಯರು ಮರ್ಮಾಂಗವನ್ನು ಕೊಯ್ದು ಗಡ್ಡೆ ತೆಗೆದಿದ್ದಾರೆ. ಆದರೆ, ಆಪರೇಷನ್ ಮುಗಿದ ಬಳಿಕ ಗಾಯಕ್ಕೆ ಹೊಲಿಗೆ (Stitch) ಹಾಕದೆ, ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಹೇಳಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫುಟ್‌ಪಾತ್‌ನಲ್ಲೇ 3 ದಿನ ನರಳಾಟ

ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಗಾಯ ಆರಿಲ್ಲ ಎಂದು ನಿರ್ಲಕ್ಷ್ಯ ತೋರಿದರೆ, ಅತ್ತ ವಾರ್ಡ್ ಸಿಬ್ಬಂದಿ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಿದ್ದಾರೆ. ಕೊನೆಗೆ ಸ್ಟಿಚ್ ಕೂಡ ಹಾಕದೆ ರೋಗಿಯನ್ನು ಹೊರಕ್ಕೆ ಕಳುಹಿಸಲಾಗಿದೆ. ಗತಿ ಇಲ್ಲದ ನವಾಜ್ ಅವರ ಪತ್ನಿ, ರಕ್ತ ಸುರಿಯುತ್ತಿದ್ದ ಪತಿಯನ್ನು ಆಸ್ಪತ್ರೆಯ ಎದುರಿನ ಫುಟ್‌ಪಾತ್‌ನಲ್ಲೇ 3 ದಿನ ಇಟ್ಟುಕೊಂಡು ಚಿಕಿತ್ಸೆಗಾಗಿ ಅಂಗಲಾಚಿದ್ದಾರೆ. ಆದರೂ ಕಲ್ಲುಹೃದಯದ ಸಿಬ್ಬಂದಿ ಮಾತ್ರ ಕರಗಿಲ್ಲ

ನಾಲ್ವರು ಮಕ್ಕಳ ಬದುಕು ಬೀದಿಗೆ:

ಮರ್ಮಾಂಗದ ವಿಪರೀತ ನೋವು ಮತ್ತು ರಕ್ತಸ್ರಾವ ತಾಳಲಾರದೆ ನವಾಜ್ ಅವರು 10 ದಿನಗಳ ಹಿಂದೆ ನರಳಿ ನರಳಿ ಪ್ರಾಣಬಿಟ್ಟಿದ್ದಾರೆ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ನವಾಜ್ ಸಾವಿನಿಂದ ಆತನ ಪತ್ನಿ ಮತ್ತು 4 ಪುಟ್ಟ ಮಕ್ಕಳು (4 ತಿಂಗಳ ಮಗುವಿನಿಂದ 6 ವರ್ಷದವರೆಗೆ) ಇಂದು ಬೀದಿಗೆ ಬಿದ್ದಿದ್ದಾರೆ.

ತಜ್ಞರ ಸಮಿತಿ ನೇಮಕ:

ಪ್ರಕರಣ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ತನಿಖೆಗಾಗಿ ತಜ್ಞರ ಸಮಿತಿಯನ್ನು ನೇಮಿಸಿದೆ. “ಸಮಿತಿಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular