HomeKarnatakaಅರೆಸ್ಟ್ ಆಗುವುದರಿಂದ 'ಜಸ್ಟ್ ಮಿಸ್' ಆಯ್ತಾ Vickypedia ತಂಡ ? ಇಲ್ಲಿದೆ ವಿವರ

ಅರೆಸ್ಟ್ ಆಗುವುದರಿಂದ ‘ಜಸ್ಟ್ ಮಿಸ್’ ಆಯ್ತಾ Vickypedia ತಂಡ ? ಇಲ್ಲಿದೆ ವಿವರ

ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಗಳು ತಮ್ಮ ಕ್ರಿಯೇಟಿವ್ ಕಂಟೆಂಟ್ ನಿಂದ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಈ ಪೈಕಿ ವಿಕಾಸ್ ಹಾಗೂ ಅಮಿತ್ ಚಿಟ್ಟೆ ನೇತೃತ್ವದ Vickypedia ತಂಡ ಕೂಡ ಒಂದು. ಈ ಜೋಡಿ ತಮ್ಮ ಇತರೆ ಸ್ನೇಹಿತರೆ ಜೊತೆ ಸೇರಿ ತಮ್ಮದೇ ಆದ ಧಾಟಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಜೊತೆಗೆ ಮನೋರಂಜನೆ ನೀಡುತ್ತಾ ಬಂದಿದ್ದಾರೆ.

ಆದರೆ ಈ ಜೋಡಿ ಇತ್ತೀಚೆಗೆ ಮಾಡಿಕೊಂಡ ಎಡವಟ್ಟೊಂದು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು ಎಂದು ಹೇಳಲಾಗಿದೆ. ವಿಕಾಸ್ ಹಾಗೂ ಅಮಿತ್, ಯುವ ಜನತೆ ಖುಷಿಯಾಗಿರಲು ಏನು ಮಾಡುತ್ತಾರೆ ಎಂಬ ಟಾಪಿಕ್ ಇಟ್ಟುಕೊಂಡು ಒಂದು ವಿಡಿಯೋ ಮಾಡಿತ್ತು. ಇದರ ಕೊನೆಯಲ್ಲಿ ವಿಕಾಸ್ ಸಿರಂಜ್ ಹಿಡಿದುಕೊಂಡು ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ ಈ ಎಡವಟ್ಟಿಗೆ ಕಾರಣ.

ಈ ವಿಡಿಯೋವನ್ನು ಗಮನಿಸಿದ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇವರುಗಳನ್ನು ಠಾಣೆಗೆ ಕರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅಲ್ಲಿಯೇ Vickypedia ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದ್ದ ಸಂಬಂಧಪಟ್ಟ ವಿಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular