ಬೆಂಗಳೂರು : ಹಿರಿಯ ಪತ್ರಕರ್ತರಾದ ದೀಪಕ್ ತಿಮ್ಮಯ್ಯ ಅವರು ಇಂದು ಗೃಹಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಸೇರ್ಪಡೆಗೊಂಡ ದೀಪಕ್ ತಿಮ್ಮಯ್ಯ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು.
ನಂತರ ಮಾತನಾಡಿದ ಡಿಕೆ ಶಿವಕುಮಾರ್ ಇವತ್ತು ಒಳ್ಳೆಯ ಮುಹೂರ್ತ ಹುಡುಕಿದ್ದೇನೆ. ದೀಪಕ್ ತಿಮ್ಮಯ್ಯ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡೆ. ಒಳ್ಳೆಯ ಸಂದರ್ಭದಲ್ಲಿ ಒಳ್ಳೆ ಸಲಹೆಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರ ಯಾರ ಹಣೆಬರಹ ಏನುಂಟೋ ಗೊತ್ತಿಲ್ಲ ಎಂದರು.
ಹಿರಿಯ ಪತ್ರಕರ್ತರಾದ ಶ್ರೀ ದೀಪಕ್ ತಿಮ್ಮಯ್ಯ ಅವರು ಇಂದು ಗೃಹಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು, ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದೆ. pic.twitter.com/iIkCv0jY0A
— DK Shivakumar (@DKShivakumar) April 11, 2024

