HomeRecipiesಮಕ್ಕಳ ಬಾಯಲ್ಲಿ ನೀರೂರಿಸುವ ‘ವೆಜಿಟಬಲ್ ನೂಡಲ್ಸ್’

ಮಕ್ಕಳ ಬಾಯಲ್ಲಿ ನೀರೂರಿಸುವ ‘ವೆಜಿಟಬಲ್ ನೂಡಲ್ಸ್’

ನೂಡಲ್ಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಈಗಂತೂ ಮನೆಯಲ್ಲಿಯೇ ಇದ್ದಾರೆ. ಬೇಗನೆ ಆಗಿ ಬಿಡುವಂತಹ ತಿಂಡಿ ಅವರಿಗೂ ಇಷ್ಟ. ಇಲ್ಲಿ ಥಟ್ಟಂತ ಮಾಡಿಬಿಡುವ ವೆಜಿಟೇಬಲ್ ನೂಡಲ್ಸ್ ಇದೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಪ್ಯಾಕ್ ಇನ್ಸ್ ಟೆಂಟ್ – ನೂಡಲ್ಸ್ (ನಿಮಗೆ ಇಷ್ಟವಾದದ್ದು), ಎಣ್ಣೆ – 1 ಟೀ ಸ್ಪೂನ್, ಕ್ಯಾರೆಟ್ – 1 ಚಿಕ್ಕದಾಗಿ ಕತ್ತರಿಸಿದ್ದು, ಬೀನ್ಸ್ – 10 (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಕ್ಯಾಪ್ಸಿಕಂ – 1/4 ಕಪ್ – ಚಿಕ್ಕದಾಗಿ ಕತ್ತರಿಸಿಕೊಳ್ಳಿ, ನೀರು – ಅಗತ್ಯವಿರುವಷ್ಟು.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ ಎಣ್ಣೆ ಹಾಕಿ ನಂತರ ಅದಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿಕೊಳ್ಳಿ. ಇದರ ಹಸಿವಾಸನೆ ಹೋಗಲಿ. ನಂತರ ಇದಕ್ಕೆ ನೂಡಲ್ಸ್ ಹಾಕಿ ಹಾಗೇ ಬಿಸಿ ನೀರು ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಟೇಸ್ಟ್ ಮೇಕರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular