HomeIndiaBIG NEWS: ವಸಂತ್ ಕುಂಜ್ ಬಳಿ ಶೂಟೌಟ್; ಬಾಲಕ ಸೇರಿ ಇಬ್ಬರು ಅರೆಸ್ಟ್

BIG NEWS: ವಸಂತ್ ಕುಂಜ್ ಬಳಿ ಶೂಟೌಟ್; ಬಾಲಕ ಸೇರಿ ಇಬ್ಬರು ಅರೆಸ್ಟ್

ನವದೆಹಲಿ: ದಕ್ಷಿಣ ದೆಹಲಿಯ ವಸಂತ್ ಕುಂಜ್ ಬಳಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸ್ ವಿಶೇಷ ದಳದವರು ಬಂಧಿಸಿದ್ದಾರೆ.

ಬಂಧಿತರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸದಸ್ಯರಾಗಿದ್ದಾರೆ. ಅವರಲ್ಲಿ ಓರ್ವ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ 15 ವರ್ಷದ ಹುಡುಗ ಹಾಗೂ ಗ್ಯಾಂಗ್ ಸದಸ್ಯ ಅನೀಶ್ (23) ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಗಳನ್ನು ವಸಂತ್ ಕುಂಜ್ ನ ಪಾಕೆಟ್-9 ಬಳಿಯಿಂದ ಬಂಧಿಸಲಾಗಿದೆ. ದಕ್ಷಿಣ ದೆಹಲಿಯ ಪ್ರಮುಖ ಹೋಟೆಲ್ ಹೊರ ಭಾಗದಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲು ಆರೋಪಿಗಳನ್ನು ನಿಯೋಜಿಸಲಾಗಿತು. ಗ್ಯಾಂಗ್ ಸ್ಟರ್ ಅನ್ಮೋಲ್ ಬಿಷ್ಣೋಯ್ ನಿರ್ದೇಶನದ ಮೇರೆಗೆ ಪಂಜಾಬ್ ಜೈಲಿನಲ್ಲಿರುವ ಅಮಿತ್ ಎಂಬಾತನಿಂದ ಸೂಚನೆ ಪಡೆದು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular