HomeKarnatakaವರಮಹಾಲಕ್ಷ್ಮೀ ಹಬ್ಬಕ್ಕೆ ಗ್ರಾಹಕರಿಗೆ ಬಿಗ್ ಶಾಕ್; ಬೆಂಗಳೂರಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ಬೆಲೆ!

ವರಮಹಾಲಕ್ಷ್ಮೀ ಹಬ್ಬಕ್ಕೆ ಗ್ರಾಹಕರಿಗೆ ಬಿಗ್ ಶಾಕ್; ಬೆಂಗಳೂರಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ಬೆಲೆ!

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೇನು ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ವಿಶೇಷವಾಗಿ ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನರು ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಆದರೆ ಹಬ್ಬದ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಹೂವು-ಹಣ್ಣುಗಳ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಹೊಡೆತ ಬಿದ್ದಿದೆ.

ಹೂವುಗಳ ಬೆಲೆ ಭಾರೀ ಏರಿಕೆ

ವರಮಹಾಲಕ್ಷ್ಮೀ ಪೂಜೆ ಹಾಗೂ ಅಲಂಕಾರಕ್ಕೆ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೆ.ಆರ್. ಮಾರುಕಟ್ಟೆಯಲ್ಲಿ ದರಗಳು ಗಣನೀಯವಾಗಿ ಏರಿಕೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

• ಸೇವಂತಿಗೆ: ಕಳೆದ ವಾರ ಕೆ.ಜಿ.ಗೆ ₹150 ಇದ್ದದ್ದು, ಈಗ ₹450

• ಮಲ್ಲಿಗೆ: ₹500ರಿಂದ ₹1,200ಕ್ಕೆ ಏರಿಕೆ

• ಕನಕಾಂಬರ: ₹2,000ರಿಂದ ಬರೋಬ್ಬರಿ ₹5,000–₹6,000ಕ್ಕೆ ಏರಿಕೆ

• ಮಲ್ಲಿಗೆ ಕೆಜಿಗೆ 1 ರಿಂದ 2 ಸಾವಿರ

• ಗುಲಾಬಿ 1 ಕೆಜಿಗೆ 400 ರೂ

• ತಾವರೆ ಹೂವು 1 ಜೋಡಿಗೆ 100 ರೂ

ಅದೇ ರೀತಿ ಎಲ್ಲಾ ಹಣ್ಣುಗಳ ಬೆಲೆ ಕೂಡ 20-30 ರೂ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಶಾಕ್ ಎದುರಾಗಿದೆ.

ಹಣ್ಣುಗಳ ದರವೂ ದುಬಾರಿ

ಹೂವುಗಳ ಜತೆಗೆ ಪೂಜೆಗೆ ಅಗತ್ಯವಿರುವ ಹಣ್ಣುಗಳ ಬೆಲೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.

• ಸೇಬು: ₹110ರಿಂದ ₹270ಕ್ಕೆ

• ದಾಳಿಂಬೆ: ₹120ರಿಂದ ₹260ಕ್ಕೆ

• ಕಿತ್ತಳೆ: ₹80ರಿಂದ ₹180ಕ್ಕೆ

• ಏಲಕ್ಕಿ ಬಾಳೆಹಣ್ಣು: ₹50ರಿಂದ ₹100ಕ್ಕೆ

• ಮೂಸಂಬಿ: ₹100ರಿಂದ ₹150ಕ್ಕೆ ಏರಿಕೆ ಕಂಡಿದೆ.

ಬೆಲೆ ಏರಿಕೆಯ ನಡುವೆಯೂ ಖರೀದಿ ಜೋರು

ಹೂವು-ಹಣ್ಣುಗಳ ದರ ದುಬಾರಿಯಾಗಿದ್ದರೂ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಿಲ್ಲ. ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಜನರು ಹೆಚ್ಚಿನ ಬೆಲೆಯ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಜನಸಂದಣಿ ಹೆಚ್ಚಾಗಿದ್ದು, ಕೆಲವೆಡೆ ಸಂಚಾರ ದಟ್ಟಣೆಯೂ ಕಂಡುಬಂದಿದೆ.

ಒಟ್ಟಿನಲ್ಲಿ, ಹಬ್ಬದ ಸಂಭ್ರಮ ಹೆಚ್ಚಾಗುತ್ತಿದ್ದಂತೆ ಹೂವು-ಹಣ್ಣುಗಳ ಬೆಲೆಯೂ ಗಗನಕ್ಕೇರಿದ್ದು, ಈ ಬಾರಿ ವರಮಹಾಲಕ್ಷ್ಮೀ ಹಬ್ಬದ ಖರೀದಿ ಗ್ರಾಹಕರಿಗೆ ದುಬಾರಿಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular