ಪೀಟರ್ ನನ್ನ ಗಂಡನಲ್ಲ; ಪತಿ ಸಾವಿನ ಶೋಕದಲ್ಲಿ ವನಿತಾ ಇದ್ದಾರೆಂದಿದ್ದಕ್ಕೆ ನಟಿ ಗರಂ

ತಮ್ಮ ಮೂರನೇ ಪತಿ ಸಾವಿನ ಶೋಕದಲ್ಲಿ ನಟಿ ವನಿತಾ ವಿಜಯ್ ಕುಮಾರ್ ಇದ್ದಾರೆ ಎಂಬ ಸುದ್ದಿ ಬಗ್ಗೆ ಗರಂ ಆಗಿರುವ ನಟಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪತಿ ಪೀಟರ್ ಪಾಲ್ ನಿಧನದಿಂದ ನಟಿ ವನಿತಾ ಶೋಕದಲ್ಲಿದ್ದಾರೆ ಎಂದು ಇತ್ತೀಚಿಗೆ ಸುದ್ದಿ ಹರಡಿತ್ತು.

ಈ ಬಗ್ಗೆ ಕೋಪದಿಂದ್ಲೇ ಸ್ಪಷ್ಟನೆ ನೀಡಿರುವ ತಮಿಳು ನಟಿ ವನಿತಾ, ನಾನು ಪೀಟರ್ ಪಾಲ್ ರನ್ನು ಕಾನೂನುಬದ್ಧವಾಗಿ ಮದುವೆಯಾಗಿಲ್ಲ, ಅವರು ನನ್ನ ಗಂಡನಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಚಿತ್ರ ನಿರ್ಮಾಪಕ ಹಾಗೂ ವಿಶುವಲ್ ಎಫೆಕ್ಟ್ ಮೇಲ್ವಿಚಾರಕ ಪೀಟರ್ ಪಾಲ್ ಇಹಲೋಕ ತ್ಯಜಿಸಿದ್ದರು. ಪತಿ ಪೀಟರ್ ಸಾವಿನ ಬಗ್ಗೆ ವನಿತಾ ದುಃಖ ತೋಡಿಕೊಂಡಿದ್ದಾರೆ ಎನ್ನಲಾಗಿತ್ತು.

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿರುವ ವನಿತಾ, “ಸರಿ ಸಾಕಷ್ಟು ತಾಳ್ಮೆಯ ನಂತರ ಮತ್ತು ಪ್ರತಿಕ್ರಿಯಿಸಬೇಕೇ ಅಥವಾ ಬೇಡವೇ ಎಂದು ಯೋಚಿಸಿದೆ……. ಎಲ್ಲಾ ಮಾಧ್ಯಮಗಳು, ಪತ್ರಿಕಾ ಮತ್ತು ಸುದ್ದಿ ಚಾನೆಲ್‌ಗಳಿಗೆ ನೆನಪಿಸುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ. ಎಲ್ಲಾ ಗೌರವಗಳೊಂದಿಗೆ, ನಾನು ದಿವಂಗತ ಪೀಟರ್ ಪಾಲ್ ಅವರನ್ನು ಎಂದಿಗೂ ಕಾನೂನುಬದ್ಧವಾಗಿ ಮದುವೆಯಾಗಿಲ್ಲ. 2020 ರಲ್ಲಿ ನಾವು ಸಂಬಂಧವನ್ನು ಹೊಂದಿದ್ದೆವು, ಅದು ಅದೇ ವರ್ಷ ಕೊನೆಗೊಂಡಿತು.

ನಾನು ಅವರ ಹೆಂಡತಿಯಲ್ಲ, ಅವರು ನನ್ನ ಗಂಡನಲ್ಲ. ನನ್ನ ಪತಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ನಾನು ತುಂಬಾ ಕಾನೂನುಬದ್ಧವಾಗಿ ಒಂಟಿಯಾಗಿದ್ದೇನೆ ಮತ್ತು ಗಂಡನನ್ನು ಹೊಂದಿಲ್ಲ. ನಾನು ಯಾವುದೇ ನಷ್ಟಕ್ಕೆ ದುಃಖಿಸುತ್ತಿಲ್ಲ. ನಾನು ಪ್ರಸ್ತುತ ಸಂತೋಷವಾಗಿದ್ದೇನೆ ಮತ್ತು ನನ್ನ ಜೀವನವನ್ನು ಪೂರ್ಣವಾಗಿ ಬದುಕುತ್ತಿದ್ದೇನೆ. ಇದು ವಿನಮ್ರ ರೀತಿಯ ವಿನಂತಿ ” ಎಂದಿದ್ದಾರೆ.

ಜೂನ್ 27, 2020 ರಂದು, ವನಿತಾ ವಿಜಯ್‌ಕುಮಾರ್ ಅವರು ತಮ್ಮ ಆಗಿನ ನಿಶ್ಚಿತ ವರ ಪೀಟರ್ ಪಾಲ್ ಅವರೊಂದಿಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಉಂಗುರ ಬದಲಾಯಿಸಿಕೊಂಡಿದ್ದರು. ಪೀಟರ್ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡದ ಕಾರಣ ದಂಪತಿಗಳು ತಮ್ಮ ವಿವಾಹವನ್ನು ನೋಂದಾಯಿಸಲಿಲ್ಲ. ಅವರ ವಿವಾಹದ ಕೆಲವು ತಿಂಗಳ ನಂತರ ವನಿತಾ ಮತ್ತು ಪೀಟರ್ ಪಾಲ್ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು.

2020 ರಲ್ಲಿ ವನಿತಾ, ಪೀಟರ್ ಪಾಲ್ ಅವರೊಂದಿಗೆ ತನ್ನ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ನಂತರ ಪೋಸ್ಟ್ ಮಾಡಲಾಗಿದ್ದ ಫೋಟೋಗಳನ್ನು ತೆಗೆದುಹಾಕಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read