HomeKarnatakaಸದನದಲ್ಲಿ ವಂದೇ ಮಾತರಂ ಸಮರ: ಸಂಪೂರ್ಣ ಗೀತೆ ಹಾಡುತ್ತೇವೆ; ತಾಕತ್ತಿದ್ದರೆ ತಡೆಯಿರಿ ಎಂದ ಆರ್.ಅಶೋಕ್

ಸದನದಲ್ಲಿ ವಂದೇ ಮಾತರಂ ಸಮರ: ಸಂಪೂರ್ಣ ಗೀತೆ ಹಾಡುತ್ತೇವೆ; ತಾಕತ್ತಿದ್ದರೆ ತಡೆಯಿರಿ ಎಂದ ಆರ್.ಅಶೋಕ್

ಬೆಂಗಳೂರು: ಇಂದಿನಿಂದ ಮೂರು ದಿನಗಳಕಾಲ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದ್ದು, ವಿಧಾನಸಭೆ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಲು ಸರ್ಕಾರ ಆದೇಶಿಸಿದೆ. ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಿಡಿಕಾರಿರುವ ವಿಪಕ್ಷ ನಾಯಕ ಆರ್‌ ಅಶೋಕ್, ನಾವು ಸದನದಲ್ಲಿ ಸಂಪೂರ್ಣ ಗೀತೆಯನ್ನು ಹಾಡೇ ಹಾಡುತ್ತೇವೆ. ತಾಕತ್ತಿದ್ದರೆ ತಡೆಯಿರಿ, ಎಂದು ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ನಮ್ಮ ರಕ್ತದ ಕಣ ಕಣದಲ್ಲೂ ವಂದೆ ಮಾತರಂ ಗೀತೆ ಇದೆ. ಡಿ.ಕೆಶಿವಕುಮಾರ್ ಅವರಂತಹ ನೂರು ಜನ ಡಿ.ಕೆ ಶಿವಕುಮಾರ್‌ ಬಂದರೂ ನಾವು ಹಾಡೇ ಹಾಡ್ತೀವಿ. ಅದ್ಯಾರೋ ಮಂತ್ರಿ ಕೇಸ್ ಹಾಕುತ್ತೇವೆ ಎಂದಿದ್ದಾರೆ. ನಾನೇ ಪೂರ್ತಿಯಾಗಿ ವಂದೇ ಮಾತರಂ ಹಾಡ್ತೀನಿ. ಕೇಸು ಹಾಕಿ ನೋಡೋಣ ಎಂದಿದ್ದಾರೆ.

ಮಸೀದಿಗಳಿಂದ ದಿನ ಬೆಳಗ್ಗೆ ಅಲ್ಲಾಹು ಅಕ್ಬರ್ ಅಂತ ಕೂಗ್ತಾನೆ ಇರ್ತಾರೆ. ಅಲ್ಲಾ ಒಬ್ಬನೇ ದೇವರು ಅಂತ ನಾವು ಕೇಳಿಸಿಕೊಳ್ಳಬೇಕು. ನಾವು ಮಾ ದುರ್ಗೆ ಅಂತ ಹೇಳಿದ್ರೆ ಕಾಂಗ್ರೆಸ್‌ನವರಿಗೆ ಕೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ, ತೀರ್ಥಹಳ್ಳಿಯಲ್ಲಿ ನಡೆದ ಸಿಎಂ ಕಾರ್ಯಕ್ರಮದಲ್ಲಿ ವಂದೇ ಮಾತರಂ ವಿವಾದ ನಡೆದಿದ್ದಕ್ಕೆ ಇವತ್ತಿನ ಸಕಲೇಶಪುರ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಕೂಡ ವಂದೇ ಮಾತರಂ ಗೀತೆ ಸಂಪೂರ್ಣ ಹಾಡುತ್ತೇವೆ ಎಂದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದೆ ಎಂದು ಆರೋಪಿಸಿದ್ದಾರೆ. ಸದನದಲ್ಲಿ ಕಡಿತಗೊಳಿಸಿದರೂ ನಾವು ಪೂರ್ಣ ಗೀತೆ ಹಾಡುತ್ತೇವೆ ಎಂದು ಹೇಳಿದ್ದಾರೆ.

ವಂದೇ ಮಾತರಂ ಹಾಡನ್ನು ಸದನದಲ್ಲಿ ಪೂರ್ತಿಯಾಗಿ ಹಾಡಲು ಬಿಜೆಪಿ, ಜೆಡಿಎಸ್ ಸದಸ್ಯರು ಪಟ್ಟು ಹಿಡಿದ್ದು. ಇದೇ ವಿಚಾರವಾಗಿ ಸದನದ ಆರಂಭದಲ್ಲೇ ಗದ್ದಲ-ಕೋಲಾಹಲ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದ ತೀವ್ರ ಬರ ಪರಿಸ್ಥಿತಿ ಮತ್ತು ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಇಂದಿನಿಂದ 3 ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ವಿಪಕ್ಷ ಬಿಜೆಪಿ ಸಜ್ಜಾಗಿದ್ದರೆ, ಸೂಕ್ತ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular