ಪ್ರಸಕ್ತ ಸಾಲಿನಲ್ಲೇ 1ರಿಂದ 10ನೇ ತರಗತಿ ಮಕ್ಕಳಿಗೆ ‘ಮೌಲ್ಯಾಧಾರಿತ ಶಿಕ್ಷಣ’: ನ. 1ರಂದು ಸಿಎಂ ಪುಸ್ತಕ ಬಿಡುಗಡೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 1ರಿಂದ 10ನೇ ತರಗತಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಈ ಕುರಿತಾದ 10 ಚಟುವಟಿಕೆ ಪುಸ್ತಕಗಳನ್ನು ರಚಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವದ ದಿನ ನವೆಂಬರ್ 1ರಂದು ಬಿಡುಗಡೆ ಮಾಡಲಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಅನುಭೂತಿ ಮತ್ತು ಪ್ರಾಮಾಣಿಕತೆ, ಬದ್ಧತೆ, ಸುಸ್ಥಿರ ಜೀವನ, ಪರಿಸರ ಜಾಗೃತಿ, ನಾಗರಿಕ ಜವಾಬ್ದಾರಿ, ವೈವಿಧ್ಯತೆ, ಸಮತೆ, ಒಳಗೊಳ್ಳುವಿಕೆ, ಭಾವನಾತ್ಮಕ ಬುದ್ಧಿವಂತಿಕೆ, ಸ್ಥಿತಿಸ್ಥಾಪಕತ್ವ, ವೈಜ್ಞಾನಿಕ ಮನೋಭಾವ, ಸೃಜನಶೀಲ ಕಲ್ಪನೆ, ಸುರಕ್ಷತೆ, ಲಿಂಗಸಮಾನತೆ ಈ 10 ಮೂಲ ಮೌಲ್ಯಗಳು ಮತ್ತು ಇತರೆ ಉಪ ಮೌಲ್ಯಗಳನ್ನು ಆಧರಿಸಿ ಚಟುವಟಿಕೆ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ರಚಿಸಿದೆ.

ಇವುಗಳ ಡಿಜಿಟಲ್ ಅವತರಣಿಕೆಯನ್ನು ಸಿಎಂ ಬಿಡುಗಡೆ ಮಾಡಲಿದ್ದಾರೆ. ವಾರದಲ್ಲಿ ಒಂದು ಅಥವಾ ಎರಡು ಗಂಟೆ ಮೌಲ್ಯ ಶಿಕ್ಷಣ ಬೋಧನೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read