HomeKarnatakaBIG NEWS: ವಾಲ್ಮೀಕಿ ನಿಗಮದಲ್ಲಿ ಅಕ್ರಮ: ಪ್ರಮುಖ ಆರೋಪಿ ಸಂಬಂಧಿಕರಿಗೂ ಇಡಿ ನೋಟಿಸ್

BIG NEWS: ವಾಲ್ಮೀಕಿ ನಿಗಮದಲ್ಲಿ ಅಕ್ರಮ: ಪ್ರಮುಖ ಆರೋಪಿ ಸಂಬಂಧಿಕರಿಗೂ ಇಡಿ ನೋಟಿಸ್

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಸಂಬಂಧಿಕರಿಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ನಿಗಮದ 89.62 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರಿಗೂ ಸಂಕಷ್ಟ ಎದುರಾಗಿದೆ. ನೆಕ್ಕಂಟಿ ನಾಗರಾಜ್ ಮಾವ ವೆಂಕಟೇಶ್ವರ್ ರಾವ್ ಅವರ ಮನೆಗೆ ಇಡಿ ಅಧಿಕಾರಿಗಳು ಭೇಟಿ ನೀಡಿದ್ದು, ವೆಂಕಟೇಶ್ವರ ರಾವ್ ಈಗಾಗಲೇ ಎಸ್ ಐಟಿ ಕಸ್ಟಡಿಯಲ್ಲಿದ್ದಾರೆ.

ಈ ಮಧ್ಯೆಯೇ ಬಳ್ಳಾರಿಯ ಕೃಷ್ಣಾನಗರ ಕ್ಯಾಂಪ್ ಗೆ ಬಂದಿದ್ದ ಇಡಿ ಅಧಿಕಾರಿಗಳು ವೆಂಕಟೇಶ್ವರ್ ರಾವ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣಾನಗರದ ಕ್ಯಾಂಪ್ ನ ಕೆಲವರಿಗೆ ನೋಟಿಸ್ ನೀಡಿದ್ದಾರೆ. ಹಣ ವಾಪಸ್ ನೀಡುವಂತೆಯೂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular