HomeCrimeಬೆಚ್ಚಿ ಬೀಳಿಸುವಂತಿದೆ ಈ ಘಟನೆ; ಪ್ರೇಯಸಿ ಹತ್ಯೆಗೈದು ಖಾಸಗಿ ಅಂಗಕ್ಕೆ ರಾಡ್ ತುರುಕಿ ವೈಶಾಚಿಕತೆ ಮೆರೆದ...

ಬೆಚ್ಚಿ ಬೀಳಿಸುವಂತಿದೆ ಈ ಘಟನೆ; ಪ್ರೇಯಸಿ ಹತ್ಯೆಗೈದು ಖಾಸಗಿ ಅಂಗಕ್ಕೆ ರಾಡ್ ತುರುಕಿ ವೈಶಾಚಿಕತೆ ಮೆರೆದ ಪಾಪಿ

ಜಾರ್ಖಂಡ್ ನ ಗರ್ವಾ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಯುವಕನೊಬ್ಬ 17 ವರ್ಷದ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವೈಶಾಚಿಕತೆ ಮೆರೆದಿದ್ದಾನೆ.

ಅಜಿನಿ ಗ್ರಾಮದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಸೋಮವಾರ ಸಮೀಪದ ಹೊಲದಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಭಾನುವಾರ ರಾತ್ರಿ ಆಕೆ ಮನೆಯವರಿಗೆ ತಿಳಿಸದೆ ಯುವಕನನ್ನು ಭೇಟಿಯಾಗಲು ತೆರಳಿದ್ದಳು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆ ಮತ್ತೊಬ್ಬನೊಂದಿಗೆ ಮಾತನಾಡುತ್ತಾಳೆ ಎಂಬ ಅನುಮಾನ ಹೊಂದಿದ್ದ ಯುವಕ ಹತ್ಯೆ ಮಾಡಿ ಇಂತಹ ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಕೃತ್ಯದ ಬಳಿಕ ಯುವಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular