ಪ್ರೇಮಿಗಳ ದಿನವೇ ಬೆಚ್ಚಿ ಬೀಳಿಸುವ ಘಟನೆ: ಗೆಳತಿ ಮೇಲೆ ರೇಪ್, ಖಾಸಗಿ ಅಂಗಕ್ಕೆ ರಾಡ್; ದುರಂತ ಅಂತ್ಯ ಕಂಡ ಹುಡುಗಿ

ರಾಂಚಿ: ಜಾರ್ಖಂಡ್‌ ನಲ್ಲಿ ಪ್ರೇಮದ ಪಾಶಕ್ಕೆ ತುತ್ತಾದ ಹುಡುಗಿಯೊಬ್ಬಳು ಪ್ರೇಮಿಗಳ ದಿನವೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿಗಳ ದಿನವನ್ನು ತನ್ನ ಸಂಗಾತಿಯೊಂದಿಗೆ  ಸ್ಮರಣೀಯವಾಗಿಸುವ ನಿರೀಕ್ಷೆಯಲ್ಲಿದ್ದ ಆಕೆಗೆ ಪ್ರಿಯಕರನೇ ಕಿಲ್ಲರ್‌ ಆಗಿದ್ದಾನೆ. ಪ್ರೇಮಿಗಳ ದಿನವೇ ತನ್ನ ಪ್ರೇಮಿಯ ಕೈಯಲ್ಲಿ ಹುಡುಗಿ ದುರಂತ ಅಂತ್ಯ ಕಂಡಿದ್ದಾಳೆ.

ಪೊಲೀಸರ ಪ್ರಕಾರ, 17 ವರ್ಷದ ಯುವತಿಯನ್ನು ಕೊಲೆ ಮಾಡುವ ಮೊದಲು ಆಕೆಯ ಪ್ರಿಯಕರ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಲಾಗಿದ್ದು, ಆಕೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್ ಅಳವಡಿಸಿ ಕೊಂದಿದ್ದಾನೆ. ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ನಿವಾಸಿಗಳು ತನ್ನ ಸಂಗಾತಿಯ ಮನೆಯ ಸಮೀಪವಿರುವ ಹೊಲದಲ್ಲಿ ಬಾಲಕಿಯ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಭಾನುವಾರ ರಾತ್ರಿ ಬಾಲಕಿ ತನ್ನ ಮನೆಯವರಿಗೆ ತಿಳಿಸದೆ ಆರೋಪಿಯನ್ನು ಭೇಟಿಯಾಗಲು ಹೋಗಿದ್ದಳು. ಸೋಮವಾರ ಬೆಳಗ್ಗೆ ಆಕೆಯ ಶವ ಪತ್ತೆಯಾಗಿದೆ ಎಂದು ಎಸ್‌ಹೆಚ್‌ಒ ಸಂತೋಷ್ ಕುಮಾರ್ ರವಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸ್ಥಳೀಯರು ಕೂಡ ಆರೋಪಿಯ ನಿವಾಸಕ್ಕೆ ತೆರಳಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮೊಬೈಲ್ ಫೋನ್ ಲೊಕೇಶನ್ ಆಧರಿಸಿ ಆರೋಪಿಯನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read