HomeLatest NewsBREAKING: ಭೀಕರ ಅಪಘಾತ: ವಚನಾನಂದ ಶ್ರೀ ಸಹೋದರ ದುರ್ಮರಣ!

BREAKING: ಭೀಕರ ಅಪಘಾತ: ವಚನಾನಂದ ಶ್ರೀ ಸಹೋದರ ದುರ್ಮರಣ!

ಬೆಳಗಾವಿ: ಭೀಕರ ಬೈಕ್ ಅಪಘಾತದಲ್ಲಿ ಯೋಗ ಗುರು ಹಾಗು ಹರಿಹರ ಪೀಠದ ಶ್ರೀವಚನಾನಂದ ಸ್ವಾಮೀಜಿಯವರ ಸಹೋದರ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಠಣಿ ತಾಲೂಕಿನಲ್ಲಿ ನಡೆದಿದೆ.

ಅಥಣಿಯ ಭರಮಕೋಡಿ ಬಳಿ ಬೈಕ್ ಅಪಘಾತಕ್ಕೀಡಾಗಿ ವಚನಾನಂದ ಶ್ರೀಗಳ ಸಹೋದರ ಸಾವನ್ನಪ್ಪಿದ್ದಾರೆ. ಅಶೋಕ್ ಗೌರಗೊಂಡ ಮೃತ ದುರ್ದೈವಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಥಣಿಯ ತಾಂವಶಿ ಮೂಲದ ಅಶೋಕ್, ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಗೆ ನಾಯಿಯೊಂದು ಅಡ್ಡ ಬಂದಿದೆ. ನಾಯಿ ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದ್ದು, ಅಶೋಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಶೋಕ್, ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದ ಅಶೋಕ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕೂಡ ಹೊಂದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular