HomeKarnatakaBIG NEWS: ಬೈಕ್ ಓವರ್ ಟೇಕ್ ಮಾಡುವಾಗ ನಡೆದ ಗಲಾಟೆ; ಯುವಕನ ಬರ್ಬರ ಕೊಲೆಯಲ್ಲಿ ಅಂತ್ಯ

BIG NEWS: ಬೈಕ್ ಓವರ್ ಟೇಕ್ ಮಾಡುವಾಗ ನಡೆದ ಗಲಾಟೆ; ಯುವಕನ ಬರ್ಬರ ಕೊಲೆಯಲ್ಲಿ ಅಂತ್ಯ

ಕಾರವಾರ: ಜಾತ್ರೆಗೆ ತೆರಳಿ ವಾಪಾಸ್ ಆಗುತ್ತಿದ್ದ ಯುವಕರ ಗುಂಪಿನ ನಡುವೆ ಬೈಕ್ ಓವರ್ ಟೇಕ್ ಮಾಡುವ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿ ಕೊಪ್ಪ ಜಾತ್ರೆಗೆ ತೆರಳಿ ವಪಾಸ್ ಆಗುತ್ತಿದ್ದ ಯುವಕರ ಗುಂಪು ಬೈಕ್ ನಲ್ಲಿ ತೆರಳುತ್ತಿತ್ತು. ಈ ವೇಳೆ ಇನ್ನೋರ್ವ ಯುವಕ ಬೈಕ್ ಓವರ್ ಟೇಕ್ ಮಾಡಿದ್ದಕ್ಕೆ ಗಲಾಟೆ ಆರಂಭವಾಗಿದೆ.

ಗಲಾಟೆ ವಿಕೋಪಕ್ಕೆ ತಿರುಗಿದ್ದು, ಓರ್ವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸಾಣಾ ಮರಾಠಿ, ಅನಿಕೇತ್ ಮಿರಾಶಿ, ರಿಶಿಕೇಶ್ ಪಾಟೀಲ್ , ಪಾಂಡುರಂಗ, ಪ್ರಶಾಂತ್ ರೂಪೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular