HomeIndiaSHOCKING: ಇಟ್ಟಿಗೆಯಿಂದ ಜಜ್ಜಿ ನಾಲ್ವರು ಮಕ್ಕಳ ಬರ್ಬರ ಹತ್ಯೆ: ತಾಯಿಯಿಂದಲೇ ಕೃತ್ಯ ಶಂಕೆ; ಬೆಚ್ಚಿ ಬಿದ್ದ...

SHOCKING: ಇಟ್ಟಿಗೆಯಿಂದ ಜಜ್ಜಿ ನಾಲ್ವರು ಮಕ್ಕಳ ಬರ್ಬರ ಹತ್ಯೆ: ತಾಯಿಯಿಂದಲೇ ಕೃತ್ಯ ಶಂಕೆ; ಬೆಚ್ಚಿ ಬಿದ್ದ ಗ್ರಾಮಸ್ಥರು

ಲಖನೌ: ನಾಲ್ವರು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ, ಆಯುಧಗಳಿಂದ ಇರಿದು ಬರ್ಬರವಾಗಿ ಹತ್ಯೆಗೈದು ಮನೆಗೆ ಬೀಗ ಹಾಕಿ ತೆರಳಿರುವ ಭೀಬತ್ಸ್ಯ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ನಾಲ್ವರು ಅಪ್ರಾಪ್ತ ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ, ಚೂಪಾದ ಆಯುಧಗಳಿಂದ ಇರಿದು ಹತ್ಯೆಮಾಡಲಾಗಿದ್ದು, ಬೀಗ ಹಾಕಿದ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ಕಂಡು ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಕೊಲೆಯಾದವರು 8,10,12 ಮತ್ತು 14 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳು. ಈ ನಾಲ್ವರೂ ಒಡಹುಟ್ಟಿದವರಾಗಿದ್ದು, ಮನೆಯೊಳಗೆ ಮಕ್ಕಳನ್ನು ಕೊಲೆ ಮಾಡಲಾಗಿದೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ತಾಯಿ ಈ ಘಟನೆ ಬಳಿಕ ನಾಪತ್ತೆಯಾಗಿದ್ದು, ಆಕೆಯೇ ಮಕ್ಕಳನ್ನು ಕೊಂದು ನಾಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆ ಮಕ್ಕಳ ತಾಯಿ ಹೆಸರಿನಲ್ಲೇ ನೋಂದಣಿಯಾಗಿದ್ದು, ಪ್ರಸ್ತುತ ಆಕೆಯೇ ಈ ತನಿಖೆಯ ಕೇಂದ್ರಬಿಂದುವಾಗಿದ್ದಾರೆ. ಪೊಲೀಸರು ಆಕೆಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮಕ್ಕಳ ತಂದೆ ಕಳೆದ ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ತನ್ನ ತಾಯಿ ಜೊತೆ ಇದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಮಕ್ಕಳು ಕೊಲೆಯಾಗಿದ್ದು, ತಾಯಿ ನಾಪತ್ತೆಯಾಗಿದ್ದಾರೆ.ಪೊಲೀಸ್ ವರಿಷ್ಠಾಧಿಕಾರಿ ಪ್ರಾಚಿ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಆ ಪ್ರದೇಶವನ್ನು ಪೊಲೀಸರು ಸೀಲ್ ಮಾಡಿದ್ದು, ತಲೆಮರೆಸಿಕೊಂಡಿರುವ ತಾಯಿಗಾಗಿ ಹುಡುಕಾಟ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular