HomeIndiaSHOCKING NEWS: ಬೆಕ್ಕು ಅಡ್ಡ ಬಂದಿದ್ದಕ್ಕೆ ಬೆಕ್ಕನ್ನೇ ಸುಟ್ಟು ಹಾಕಿದ ಮಹಿಳೆ!

SHOCKING NEWS: ಬೆಕ್ಕು ಅಡ್ಡ ಬಂದಿದ್ದಕ್ಕೆ ಬೆಕ್ಕನ್ನೇ ಸುಟ್ಟು ಹಾಕಿದ ಮಹಿಳೆ!

ಎಲ್ಲಿಗಾದರೂ ಹೋಗುವಾಗ ಬೆಕ್ಕು ಅಡ್ದ ಬಂದರೆ ಅಶುಭ ಎಂದು ಹಲವರು ಕೆಲ ಕಾಲ ನಿಂತು ಹೊರಡುವ ಸಮಯವನ್ನು ಸ್ವಲ್ಪ ಕಾಲ ಮುಂದೂಡುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಇಂತದ್ದೊಂದು ಮೂಢನಂಬಿಕೆಯನ್ನು ಇಂದಿಗೂ ಹಲವರು ಪಾಲಿಸುತ್ತಾರೆ. ಇಲ್ಲೋರ್ವ ಮಹಿಳೆ ಬೆಕ್ಕು ಅಡ್ಡ ಬಂತು ಎಂದು ಬೆಕ್ಕನ್ನೇ ಸುಟ್ಟು ಹಾಕಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು ಫ್ರೆಂಡ್ಸ್ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ದಾರಿಗೆ ಅಡ್ಡಲಾಗಿ ಬೆಕ್ಕು ಬಂದಿದೆ. ಬೆಕ್ಕು ಅಡ್ಡ ಬಂದಿದ್ದಕ್ಕೆ ಕೋಪಗೊಂಡ ಮಹಿಳೆ ಬೆಕ್ಕನ್ನು ಹಿಡಿದು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಈ ಘಟನೆ ನಡೆದಿದೆ.

ಬೆಕ್ಕು ಅಡ್ಡಬಂದಿದ್ದಕ್ಕೆ ಮಹಿಳೆ ಹಾಗೂ ಆಕೆಯ ಸ್ನೇಹಿತರ ಗುಂಪು ಬೆಕ್ಕನ್ನು ಬೆನ್ನಟ್ಟಿ ಹೋಗಿ ಹಿಡಿದು, ಮನಬಂದಂತೆ ಥಳಿಸಿ, ಪೆಟ್ರೋಲ್ ಸುರಿದು ಬೆಕ್ಕನ್ನು ಸುಟ್ಟುಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಾ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular