HomeKarnatakaBIG NEWS: ವಾಹನಗಳ ಬಿಡಿ ಭಾಗ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ

BIG NEWS: ವಾಹನಗಳ ಬಿಡಿ ಭಾಗ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಕಾರವಾರ: ವಾಹನಗಳ ಬಿಡಿ ಭಾಗ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಕೈಗಾರಿಕಾ ಪ್ರದೇಶದ ಕೊಳಗಿಬೀಸ್ ನಲ್ಲಿರುವ ಮಾನ್ಯ ಇಂಡಸ್ಟ್ರೀಸ್ ನಲ್ಲಿ ಈ ಅವಘಡ ಸಂಭವಿಸಿದೆ. ಕಾರಿನ ಡ್ಯಾಷ್ ಬೋರ್ಡ್ ತಯಾರಿಸುವ ಫೈಬರ್ ಫ್ಯಾಕ್ಟರಿ ಇದಾಗಿದ್ದು, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಖಾನೆಯ ತುಂಬೆಲ್ಲ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಮಶಿಗದ್ದೆಯ ರಾಘವ್ ವಿಶ್ವೇಶ್ವರ ಹೆಗಡೆ ಎಂಬುವವರಿಗೆ ಸೇರಿದ ಫ್ಯಾಕ್ಟರಿ ಇದಾಗಿದೆ. ಫ್ಯಾಕ್ಟರಿಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ.

For Latest News Updates, Join Our Whatsapp Community🚩
RELATED ARTICLES

Most Popular