HomeIndiaBIG NEWS: ಸಚಿವರ ಬೆಂಗಾವಲು ಸಿಬ್ಬಂದಿ ಮೇಲೆ ದಾಳಿ: ಇಬ್ಬರು ಅರೆಸ್ಟ್

BIG NEWS: ಸಚಿವರ ಬೆಂಗಾವಲು ಸಿಬ್ಬಂದಿ ಮೇಲೆ ದಾಳಿ: ಇಬ್ಬರು ಅರೆಸ್ಟ್

ಲಖನೌ: ಉತ್ತರ ಪ್ರದೇಶದಲ್ಲಿ ಸಚಿವರ ಬೆಂಗಾವಲು ಸಿಬ್ಬಂದಿಯ ಮೇಲೆ ಯುವಕರ ಗುಂಪು ದಾಳಿ ನಡೆಸಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮನೋಹರ್ ಲಾಲ್ ಅವರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ ಪೊಲೀಸರು ಪಿಸ್ತೂಲು ವಶಕ್ಕೆ ಪಡೆದಿದ್ದಾರೆ.

ಆಗ್ರಾ ಕಾರ್ಯಕರಮ ಮುಗಿಸಿ ವಾಪ್ಪಾಸ್ ಆಗುತ್ತಿದ್ದಾಗ ಕಾರು ರಿವರ್ಸ್ ತೆಗೆದುಕೊಳ್ಳುವ ವಿಚಾರವಾಗಿ ಬೈಕ್ ಸವಾರರ ಜೊತೆ ಭದ್ರತಾ ಸಿಬ್ಬಂದಿ ವಾಗ್ವಾದ ನಡೆದಿದೆ. ಗಲಾಟೆಯಲ್ಲಿಇ ಬೈಕ್ ಸವಾರನಿಗೆ ಸಿಬ್ಬಂದಿ ಸರ್ವೇಶ್ ಕುಮರ್ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆ ಯುವಕರ ಗ್ಯಾಂಗ್ ಸಚಿವರ ಬೆಂಗಾವಲು ಕಾರು ಅಡ್ಡಗಟ್ಟಿ, ಸಚಿವರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ. 10-15 ಜನ ಯುವಕರ ಗುಂಪು ಬೆಂಗಾವಲು ವಾಹನಕ್ಕೆ ಮುತ್ತಿಗೆ ಹಾಕಿದೆ. ಸಿಬ್ಬಂದಿಗೆ ಥಳಿಸಿ ಅವರ ಬಳಿ ಇದ್ದ ಪಿಸ್ತೂಲು ಕಿತ್ತುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವರ ಸಿಬ್ಬಂದಿ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular