ಯುವಕನೊಬ್ಬ ಪ್ರಿಯತಮೆಯ ದುಪ್ಪಟ್ಟಾದಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಮ್ರೇಜ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಅಂತರ್ಧರ್ಮೀಯ ಸಂಬಂಧವನ್ನು ಎರಡೂ ಕುಟುಂಬದವರು ನಿರಾಕರಿಸಿದ್ದರು. ಯುವತಿಗೆ ಇತ್ತೀಚೆಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥವಾಗಿತ್ತು. ಮನನೊಂದ ಯುವಕ ಕುರ್ದಿಖೇಡ ಗ್ರಾಮದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರೇಯಸಿಯಿಂದ ದೂರಾಗಿದ್ದಕ್ಕೆ ಹಾಗೂ ಆಕೆಗೆ ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾಗುತ್ತಿದ್ದಂತೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರದಲ್ಲಿ ಶವಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಸುಮ್ರೇಜ್ ನ ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.