HomeEntertainmentಮೇ 3ಕ್ಕೆ ತೆರೆ ಕಾಣಲಿದೆ 'ಉಸಿರೇ ಉಸಿರೇ'

ಮೇ 3ಕ್ಕೆ ತೆರೆ ಕಾಣಲಿದೆ ‘ಉಸಿರೇ ಉಸಿರೇ’

Usire Usire (2024) - Movie | Reviews, Cast & Release Date in bengaluru- BookMyShow

ರಾಜೀವ್ ಅಭಿನಯದ ಸಿಎಂ ವಿಜಯ್ ನಿರ್ದೇಶನದ ಬಹುನಿರೀಕ್ಷಿತ ‘ಉಸಿರೇ ಉಸಿರೇ’ ಚಿತ್ರ ಇದೇ ಮೇ ಮೂರಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.  ಟಾಲಿವುಡ್ ನ ಖ್ಯಾತ ಹಾಸ್ಯ ಕಲಾವಿದ ಬ್ರಹ್ಮಾನಂದಂ ಕೂಡ ಅಭಿನಯಿಸಿದ್ದು, ಮಾಧ್ಯಮ ಒಂದರಲ್ಲಿ ಮಾತನಾಡಿರುವ ಅವರು ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಥಿಯೇಟರ್ ನಲ್ಲೇ ಸಿನಿಮಾ ನೋಡುವ ಮೂಲಕ  ಹಾರೈಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಾಜೀವ್ ಅನು ಮತ್ತು ಶ್ರೀಜಿತಗೋಷ್ ಸೇರಿದಂತೆ ಸುಚೇಂದ್ರ ಪ್ರಸಾದ್, ತಾರಾ, ರಾಜೇಶ್ ನಟರಂಗ, ಸಾಧುಕೋಕಿಲ, ದೇವರಾಜ್, ಬ್ರಹ್ಮಾನಂದಂ, ಮಂಜು ಪಾವಗಡ,  ಜಗ್ಗಪ್ಪ, ಸುಶ್ಮಿತಾ, ಸೀತಾರಾಮ್, ನಿಕಿತಾ, ವಿಜಯ್, ಪ್ರೀತಮ್, ತೆರೆ ಹಂಚಿಕೊಂಡಿದ್ದು, ಗೊಂಬೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಮಂಜು ಛಾಯಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular