HomeBeautyʼದಾಲ್ಚಿನಿʼಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ...?

ʼದಾಲ್ಚಿನಿʼಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಚರ್ಮದ ಪ್ರಕಾರ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು ದಾಲ್ಚಿನಿಯನ್ನು ಹೇಗೆ ಬಳಸಿಕೊಳ್ಳಲು ಎಂಬುದನ್ನು ತಿಳಿಯಿರಿ.

  • ಎಣ್ಣೆಯುಕ್ತ ಚರ್ಮದವರು ಮೊಡವೆಗಳ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ದಾಲ್ಚಿನಿಯನ್ನು ಬಳಸುವುದರಿಂದ ಅವರ ಈ ಸಮಸ್ಯೆ ನಿವಾರಣೆಯಾಗುತ್ತದೆ. 1 ಚಮಚ ದಾಲ್ಚಿನಿ ಪುಡಿಗೆ 3 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.
  • ಒಣ ಚರ್ಮದ ಸಮಸ್ಯೆ ಇರುವವರ ಚರ್ಮ ಯಾವಾಗಲೂ ತೇವಾಂಶವನ್ನು ಕಳೆದುಕೊಂಡು ಡ್ರೈ ಆಗಿ ಕಾಂತಿಯನ್ನು ಕಳೆದುಕೊಳ್ಳುತ್ತದೆ. ದಾಲ್ಚಿನಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಮುಖ ಹೊಳೆಯುತ್ತದೆ. ಹಾಗಾಗಿ 1 ಚಮಚ ಬಾಳೆಹಣ್ಣಿನ ಪೇಸ್ಟ್ ಗೆ 1 ಚಮಚ ಮೊಸರು, ½ ಚಮಚ ದಾಲ್ಚಿನಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ತೇವಾಂಶಗೊಂಡು ಹೊಳಪಿನಿಂದ ಕೂಡಿರುತ್ತದೆ.
  • ಎಣ್ಣೆ ಮತ್ತು ಒಣ ಚರ್ಮ ಹೊಂದಿರುವವರು 2 ಚಮಚ ಆಲಿವ್ ಆಯಿಲ್ ಅಥವಾ ತೆಂಗಿನೆಣ್ಣೆಗೆ 1 ಚಮಚ ದಾಲ್ಚಿನಿ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.
For Latest News Updates, Join Our Whatsapp Community🚩
RELATED ARTICLES

Most Popular