ಲಖ್ನೋ: ಗಂಡ ಮಲಗಿದ್ದಾಗ ಕತ್ತು ಹಿಸುಕಿ ಕೊಂದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ತನ್ನ ಗಂಡ ತನ್ನ ಮೊದಲ ಹೆಂಡತಿಯ ವಿಚಾರದಲ್ಲಿ ತನ್ನನ್ನು ನಿರ್ಲಕ್ಷಿಸುತ್ತಿದ್ದ ಎಂದು ಆರೋಪಿ ಹೇಳಿದ್ದಾಳೆ.
ಗಂಡನ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಆರೋಪಿ ಆತನನ್ನು ಕೊಂದಿದ್ದಾಳೆ. ಈ ಘಟನೆ ಆಗಸ್ಟ್ 29 ರಂದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಆರೋಪಿ 30 ವರ್ಷದ ಕವಿತಾಳನ್ನು ಶನಿವಾರ ಬಂಧಿಸಲಾಗಿದೆ. ಸಂಜಯ್ ಕುಮಾರ್(40) ಅವರನ್ನು ಅವರ ಎರಡನೇ ಪತ್ನಿ ಕವಿತಾ ಕೊಂದಿದ್ದಾಳೆ ಎಂದು ಮೃತರ ತಂದೆ ಭೋಪಾಲ್ ಸಿಂಗ್ ಅವರು ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಸ್ಟೇಷನ್ ಹೌಸ್ ಆಫೀಸರ್(SHO) ದಿನೇಶ್ ಚಂದ್ ಭಾಗೇಲ್ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಕವಿತಾ, ನಿದ್ದೆಯಲ್ಲಿದ್ದಾಗ ಸಂಜಯ್ ಕತ್ತು ಹಿಸುಕಿ ಕೊಂದಿದ್ದಾಗಿ ಒಪ್ಪಿಕೊಂಡರು, ಮೊದಲ ಹೆಂಡತಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಹೇಳಿದ್ದಾಳೆ. ಸಂಜಯ್ ಮತ್ತು ಕವಿತಾ 2000ರಲ್ಲಿ ವಿವಾಹವಾದರು. ಅವರ ಮೊದಲ ಪತ್ನಿ ತಾಂಡಾ ಮಜ್ರಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.