HomeBeautyಉಗುರಿನ ಸೌಂದರ್ಯ ಹೆಚ್ಚಿಸಲು ಟೂತ್ ಪೇಸ್ಟ್ ಬಳಸಿ

ಉಗುರಿನ ಸೌಂದರ್ಯ ಹೆಚ್ಚಿಸಲು ಟೂತ್ ಪೇಸ್ಟ್ ಬಳಸಿ

ಸುಂದರ ಹಾಗೂ ಹೊಳೆಯುವ ಉಗುರುಗಳು ನಿಮ್ಮ ಕೈ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಳದಿ ಉಗುರುಗಳು ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಅನೇಕ ದಿನಗಳವರೆಗೆ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದಲ್ಲಿ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಯಾಕೆಂದ್ರೆ ನೇಲ್ ಪಾಲಿಶ್ ನಿಂದಾಗಿ ಉಗುರುಗಳಿಗೆ ಆಮ್ಲಜನಕ ಸಿಗುವುದಿಲ್ಲ.

ಟೂತ್ ಪೇಸ್ಟ್ ನಮ್ಮ ಹಲ್ಲನ್ನು ಸ್ವಚ್ಛಗೊಳಿಸುವ ಜೊತೆಗೆ ನಮ್ಮ ಉಗುರಿನ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್.

ಅರ್ಧ ಚಮಚ ನಿಂಬೆ ರಸ, ಒಂದು ಚಮಚ ಟೂತ್ ಪೇಸ್ಟ್ ತೆಗೆದುಕೊಳ್ಳಿ. ಮೊದಲು ಉಗುರನ್ನು ಸ್ವಚ್ಛಗೊಳಿಸಿಕೊಳ್ಳಿ. ಉಗುರಿಗೆ ಹಚ್ಚಿರುವ ನೇಲ್ ಪಾಲಿಶನ್ನು ತೆಗೆಯಿರಿ. ನಂತ್ರ ಟೂತ್ ಪೇಸ್ಟ್ ಗೆ ನಿಂಬು ರಸ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಉಜ್ಜಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಲ್ಲದೆ ಒಂದು ಚಮಚ ಆಲಿವ್ ಆಯಿಲ್ ಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಉಗುರಿಗೆ ಹಚ್ಚಿಕೊಳ್ಳಿ. ನಂತ್ರ ಅದರ ಮೇಲೆ ನಿಂಬೆ ರಸವನ್ನು ಹಾಕಿ 15 ನಿಮಿಷದ ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

For Latest News Updates, Join Our Whatsapp Community🚩
RELATED ARTICLES

Most Popular